ತುಪ್ಪದ ಪ್ರಯೋಜನ

ತುಪ್ಪವು ಒಂದು ಡೈರಿ ಉತ್ಪನ್ನವಾಗಿದ್ದು ಇದನ್ನು ಕೆನೆ ಸಹಾಯದಿಂದ ತಯಾರಿಸಲಾಗುತ್ತದೆ. ತುಪ್ಪವು ನಿಮ್ಮ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ.

Bhavishya Shetty
Apr 07,2023

ತುಪ್ಪದ ಪ್ರಯೋಜನ

ತುಪ್ಪವನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತವೆ. ಜೊತೆಗೆ ಆರೋಗ್ಯಕರ ಚರ್ಮವನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?

ತುಪ್ಪದ ಪ್ರಯೋಜನ

ತುಪ್ಪವು ವಿಟಮಿನ್ ಎ, ಡಿ, ಇ, ಕೆ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಗುಣಗಳನ್ನು ಹೊಂದಿದೆ. ಇದು ನಿಮ್ಮ ತ್ವಚೆಯಿಂದ ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ತುಪ್ಪದ ಪ್ರಯೋಜನ

ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಗಳು, ಮೊಡವೆಗಳು ಮತ್ತು ಡಾರ್ಕ್ ಸರ್ಕಲ್ ಸಮಸ್ಯೆಗಳನ್ನು ತೊಡೆದುಹಾಕಬಹುದು. ಈ ಮೂಲಕ ಮೃದುವಾದ ಮತ್ತು ಹೊಳೆಯುವ ತ್ವಚೆಯನ್ನು ಪಡೆಯಬಹುದು.

ತುಪ್ಪದ ಪ್ರಯೋಜನ

ಸ್ವಲ್ಪ ತುಪ್ಪ, ಒಂದು ಚಿಟಿಕೆ ಅರಿಶಿನ, ಕೊಂಚ ನಿಂಬೆ ರಸದ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ತೊಳೆದರೆ ಟ್ಯಾನಿಂಗ್ ಸಮಸ್ಯೆ ನಿಮಿಷದಲ್ಲಿ ದೂರವಾಗುತ್ತದೆ.

ತುಪ್ಪದ ಪ್ರಯೋಜನ

ಒಂದೂವರೆ ಚಮಚ ತುಪ್ಪಕ್ಕೆ 3-4 ರಿಂಗ್ ಕೇಸರಿ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, 20 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದು ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತುಪ್ಪದ ಪ್ರಯೋಜನ

2 ಚಮಚ ತುಪ್ಪ, ಒಂದು ಚಮಚ ಕಡಲೆ ಹಿಟ್ಟು, ಒಂದು ಚಿಟಿಕೆ ಅರಿಶಿನ ಮತ್ತು ನಿಂಬೆ ಹನಿಗಳನ್ನು ಹಾಕಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ತೊಳೆಯಿರಿ. ಹೀಗೆ ಮಾಡಿದರೆ ಪಿಗ್ಮೆಂಟೇಶನ್ ಸಮಸ್ಯೆ ದೂರವಾಗುತ್ತದೆ.

ತುಪ್ಪದ ಪ್ರಯೋಜನ

ಅಂಗೈಗೆ ಸ್ವಲ್ಪ ತುಪ್ಪವನ್ನು ಹಾಕಿ, ಅದನ್ನು ಚೆನ್ನಾಗಿ ಮುಖದ ಮೇಲೆ ಮಸಾಜ್ ಮಾಡಿ. ರಾತ್ರಿ ಮಲಗುವ ಮುನ್ನ ಕಣ್ಣಿನ ಕೆಳಗೆ ಮಸಾಜ್ ಮಾಡಿದರೆ ಕಪ್ಪು ವರ್ತುಲ ಸಮಸ್ಯೆ ದೂರವಾಗುತ್ತದೆ.

ತುಪ್ಪದ ಪ್ರಯೋಜನ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story