ಅರಿಶಿನವು ಚರ್ಮದ ಹೊಳಪನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡುವ ಮಸಾಲೆ ಪದಾರ್ಥ. ಮುಖದ ಮೇಲಿನ ಕಪ್ಪು ಕಲೆಗಳು, ಹೈಪರ್ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚಿನ ಭಾರತೀಯ ಮದುವೆಗಳಲ್ಲಿ ಅರಿಶಿನ ಅಥವಾ ಹಲ್ದಿಯನ್ನು ಆಚರಣೆ ಮಾಡಲಾಗುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಮೊಡವೆಗಳನ್ನು ಹೊಡೆದೋಡಿಸಲು ಅರಿಶಿನವು ಉತ್ತಮವಾಗಿದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಸಕ್ರಿಯ ಘಟಕವು ಮೊಡವೆ ವಲ್ಗ್ಯಾರಿಸ್ ವಿರುದ್ಧ ಹೋರಾಡುವ ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.
ನಿಮ್ಮ ಚರ್ಮವು ಹೆಚ್ಚಾಗಿ UV ಕಿರಣಗಳು ಮತ್ತು ಪರಿಸರ ಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತದೆ. ಇದು ಚರ್ಮದ ನೈಸರ್ಗಿಕ ತೈಲ ಸಮತೋಲನವನ್ನು ತೊಂದರೆಗೊಳಿಸುತ್ತದೆ.
ಅರಶಿನ ಪೇಸ್ಟ್ ಮುಖಕ್ಕೆ ಹಚ್ಚುವುದರಿಂದ ರಿಂಕಲ್ಸ್, ಡಾರ್ಕ್ ಸರ್ಕಲ್, ಟ್ಯಾನ್ ನಂತಹ ಸಮಸ್ಯೆಗಳು ದೂರವಾಗುತ್ತದೆ.
ಮುಖದ ಸೋರಿಯಾಸಿಸ್ ಚಿಕಿತ್ಸೆಗೆ ಅರಿಶಿನವು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಸೂಚಿಸುತ್ತಾರೆ. ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕವಾಗಿರುವ ಅರಿಶಿನವು ಸೋರಿಯಾಸಿಸ್ಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ .