ಬದನೆಕಾಯಿ ನಂಜು ಎಂಬ ಕಾರಣಕ್ಕೆ ಅನೇಕರು ಅದನ್ನು ತಿನ್ನಲು ಹಿಂದೇಟು ಹಾಕುತ್ತಾರೆ.
ಅಡುಗೆಯ ರುಚಿಯ ಹೆಚ್ಚಿಸುವ ಬದನೆಕಾಯಿ ಆರೋಗ್ಯಕ್ಕೂ ಉತ್ತಮ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.
ಬದನೆಕಾಯಿಯಲ್ಲಿ ನಾರಿನಾಂಶ, ವಿಟಮಿನ್ ಹಾಗೂ ಮಿನರಲ್ಸ್‌ನಂತಹ ಪೋಷಕಾಂಶಗಳು ಸಮೃದ್ದವಾಗಿದೆ.
ಬದನೆಕಾಯಿಯಲ್ಲಿ ವಿಟಮಿನ್ ಎ ಮತ್ತು ಸಿಯಂತಹ ಉತ್ಕರ್ಷಣ ನಿರೋಧಕ ಅಂಶಗಳಿವೆ.
ಬದನೆಕಾಯಿಯಲ್ಲಿ ಮೆಗ್ನೆಶಿಯಂ, ಮ್ಯಾಂಗನಿಸ್, ಪೊಟ್ಯಾಶಿಯಂ ಹಾಗೂ ಕಾಪರ್ ಅಂಶ ಸಮೃದ್ಧವಾಗಿದ್ದು, ಇವು ಮೂಳೆಗಳ ಆರೋಗ್ಯಕ್ಕೆ ಬಹಳ ಉತ್ತಮ.
ಬದನೆಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
ಬಯೋಆಕ್ಟಿವ್ ಸಂಯುಕ್ತಗಳನ್ನು ಹೊಂದಿರುವ ಬದನೆಕಾಯಿ ಕ್ಯಾನ್ಸರ್‌ಗೆ ತಡೆಯಲು ಸಹಾಯ ಮಾಡುತ್ತದೆ.
ನೀರಿನಾಂಶ, ನಾರಿನಾಂಶ ಹಾಗೂ ವಿಟಮಿನ್ ಅಂಶ ಹೊಂದಿರುವ ಬದನೆಕಾಯಿ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.