ದೇಹಕ್ಕೆ ಪ್ರಯೋಜನಕಾರಿ

ಸಾಸಿವೆ ಎಣ್ಣೆಯ ಸೇವನೆಯು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಅದನ್ನ ದೇಹಕ್ಕೆ ಹಚ್ಚುವುದು ಅಷ್ಟೇ ಪ್ರಯೋಜನಕಾರಿ.

Puttaraj K Alur
Apr 23,2025

ದೇಹಕ್ಕೆ ಮಸಾಜ್

ಸಾಸಿವೆ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬಾಡಿ ಮಸಾಜ್‌

ಬಾಡಿ ಮಸಾಜ್‌ಗಾಗಿ ಜನರು ದೇಸಿ ತುಪ್ಪ, ತೆಂಗಿನಕಾಯಿ, ಬಾದಾಮಿ ಎಣ್ಣೆ ಮತ್ತು ಇತರ ಎಸೆನ್ಶಿಯಲ್ ಆಯಿಲ್ ಬಳಸುತ್ತಾರೆ.

ಚಳಿಗಾಲ

ಆದರೆ ಚಳಿಗಾಲವು ಪ್ರಾರಂಭವಾದಾಗ ದೇಹಕ್ಕೆ ಮಸಾಜ್ ಮಾಡಲು ಸಾಸಿವೆ ಎಣ್ಣೆ ಬಳಸುವುದು ಉತ್ತಮ.

ಔಷಧೀಯ ಗುಣ

ಸಾಸಿವೆ ಎಣ್ಣೆಯು ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಕೊಬ್ಬುಗಳ ಉತ್ತಮ ಮೂಲವಾಗಿದೆ.

ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲ

ಸಾಸಿವೆ ಎಣ್ಣೆಯು ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಿಂದ (PUFA) ಸಮೃದ್ಧವಾಗಿದೆ.

ಉರಿಯೂತ ಶಮನಕಾರಿ

ಸಾಸಿವೆ ಎಣ್ಣೆಯು ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಲಕ್ಷಣ ಮತ್ತು ಒಮೆಗಾ -3 ಮತ್ತು 6ರಲ್ಲಿ ಸಮೃದ್ಧವಾಗಿದೆ.

ರಕ್ತ ಪರಿಚಲನೆ

ಸಾಸಿವೆ ಎಣ್ಣೆಯಿಂದ ಮಜಾಸ್‌ ಮಾಡಿದ್ರೆ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ

VIEW ALL

Read Next Story