ಮೊಳಕೆ ಭರಿಸಿದ ಕಾಳುಗಳು ಸಂಪೂರ್ಣ ಪೋಷಕಾಂಶಳಿಂದ ಕೂಡಿದ್ದು, ಆರೋಗ್ಯಕ್ಕೆ ಅಗತ್ಯ ಶಕ್ತಿ ಹಾಗೂ ಪೋಷಣೆ ನೀಡುತ್ತದೆ.
ಹೆಸರು ಕಾಳಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳಿರುತ್ತವೆ. ಒಂದು ಕಪ್ ಮೊಳಕೆ ಭರಿಸಿದ ಕಾಳಿನಲ್ಲಿ ಕೇವಲ 31 ಕ್ಯಾಲೋರಿಗಳಿರುತ್ತವೆ.
ಹೆಸರು ಕಾಳಿನಲ್ಲಿ ಕಾಬ್ರ್ಸ್, ಪ್ರೋಟೀನ್‍ಗಳು, ಪೋಲೇಟ್, ವಿಟಮಿನ್ ʼಸಿʼ ಮತ್ತು ಕಬ್ಬಿಣಾಂಶ ಸಮೃದ್ಧವಾಗಿವೆ.
ಮೊಳಕೆ ಭರಿಸಿದ ಕಾಳು ಸೇವಿಸುವುದರಿಂದ ಉತ್ಕರ್ಷಣ ಮತ್ತು ರೋಗ ನೀರೋಧಕ ಶಕ್ತಿಯು ಹೆಚ್ಚಾಗುತ್ತದೆ.
ಮೊಳಕೆ ಕಾಳು ಸೇವನೆಯಿಂದ ಕ್ಯಾನ್ಸರ್‌ನಂತಹ ಪ್ರಾಣಾಂತಿಕ ಕಾಯಿಲೆಯನ್ನು ತಡೆಯಲು ಸಹಾಯ ಮಡುವುದು.
ಮೊಳಕೆ ಕಾಳು ಸೇವನೆಯಿಂದ ಟೈಪ್-2 ಡಯಾಬಿಟಿಸ್, ಹೃದಯ ರೋಗ ಸಮಸ್ಯೆಗಳನ್ನ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮೊಳಕೆ ಕಾಳಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.