ಆಲೂಗಡ್ಡೆ ಅಥವಾ ಸೌತೆಕಾಯಿಯನ್ನು ತುರಿ ಮಾಡಿ ಅದರ ರಸವನ್ನು ಹತ್ತಿ ಉಂಡೆಗಳ ಸಹಾಯದಿಂದ ಕಣ್ಣುಗಳ ಸುತ್ತಾ ಮಸಾಜ್ ಮಾಡಿ ಅಥವಾ ಕಣ್ಣುಗಳ ಮೇಲೆ ಇರಿಸಿ.
ತಣ್ಣನೆಯ ಹಾಲಿನಲ್ಲಿ ಹತ್ತಿ ಉಂಡೆಯನ್ನು ಅದ್ದಿ, ಕಣ್ಣಿನ ಸುತ್ತಾ ಅನ್ವಯಿಸಿ. ಸ್ವಲ್ಪ ಹೊತ್ತು ಹಾಗೆಯೇ ಇಟ್ಟು ನಂತರ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಿರಿ. ವಾರಕ್ಕೆ ಕನಿಷ್ಠ ಮೂರು ಬಾರಿ ಪುನರಾವರ್ತಿಸಿ.
ಅಲೋವೆರಾ ಜೆಲ್ ಅನ್ನು ಕಣ್ಣುಗಳ ಕೆಳಗೆ ನಿಧಾನವಾಗಿ ಅನ್ವಯಿಸಿ ಮತ್ತು 5-7 ನಿಮಿಷಗಳ ಕಾಲ ಮಸಾಜ್ ಮಾಡಿ.
1 ಟೀ ಚಮಚ ಬಾದಾಮಿ ಎಣ್ಣೆ, ಕೊಂಚ ನಿಂಬೆ ರಸವನ್ನು ಮಿಶ್ರಣ ಮಾಡಿ, ಕಣ್ಣಿನ ಸುತ್ತಲೂ ಹಚ್ಚಿ ಮಸಾಜ್ ಮಾಡಿ. ಬಳಿಕ 2 ರಿಂದ 3 ನಿಮಿಷಗಳ ಕಾಲ ಬಿಟ್ಟು ಮುಖವನ್ನು ತೊಳೆಯಿರಿ
ಹತ್ತಿ ಉಂಡೆಯನ್ನು ರೋಸ್ ವಾಟರ್ನಲ್ಲಿ ನೆನೆಸಿ, ಬಳಿಕ ಕಣ್ಣುರೆಪ್ಪೆಗಳ ಮೇಲೆ ಇರಿಸಿ. 10 ರಿಂದ 15 ನಿಮಿಷಗಳ ಕಾಲ ಬಿಡಿ.
1 ಚಮಚ ನಿಂಬೆ ರಸದೊಂದಿಗೆ 1 ಟೀ ಚಮಚ ಟೊಮೆಟೊ ರಸವನ್ನು ಮಿಶ್ರಣ ಮಾಡಿ, ಕಣ್ಣಿನ ಎರಡೂ ಭಾಗಗಳ ಕೆಳಗೆ ಹಚ್ಚಿ. 10 ನಿಮಿಷಗಳ ನಂತರ ಚೆನ್ನಾಗಿ ಮುಖ ತೊಳೆಯಿರಿ.