ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವುದು ಮೂತ್ರಪಿಂಡಗಳ ಮುಖ್ಯ ಕಾರ್ಯ.
ಮೂತ್ರಪಿಂಡದ ಕಾರ್ಯವು ಶೇ.90ರಷ್ಟು ಕಡಿಮೆಯಾಗುವವರೆಗೆ ದೇಹದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ.
ಕಿಡ್ನಿಗೆ ಸಂಬಂಧಿಸಿದ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ.
ಮೂತ್ರಪಿಂಡಗಳು ದೇಹದಲ್ಲಿರುವ ಕಲ್ಮಶಗಳನ್ನ ಸರಿಯಾಗಿ ಶೋಧಿಸದಿದ್ದಾಗ ದೇಹದಲ್ಲಿ ದ್ರವದ ಧಾರಣವು ಕಾಲುಗಳು, ಮುಖ ಮತ್ತು ದೇಹದ ಇತರ ಭಾಗಗಳ ಊತವನ್ನುಂಟು ಮಾಡಬಹುದು.
ಚಿಕ್ಕ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಸಮಸ್ಯೆಗಳ ಸಂಕೇತವಾಗಿರಬಹುದು. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮೂತ್ರಪಿಂಡಗಳು ಪ್ರಮುಖ ಪಾತ್ರವಹಿಸುತ್ತವೆ.
ಮೂತ್ರ ವಿಸರ್ಜಿಸಲು ರಾತ್ರಿಯಲ್ಲಿ ಆಗಾಗ ಏಳುವುದು ಕೂಡ ಕಿಡ್ನಿ ವೈಫಲ್ಯದ ಆರಂಭಿಕ ಸಂಕೇತವಾಗಿರಬಹುದು.
ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತ ಬರುವುದು ಅಥವಾ ಮೂತ್ರದ ಬಣ್ಣದಲ್ಲಿ ಬದಲಾವಣೆ ಮೂತ್ರಪಿಂಡದ ಸಮಸ್ಯೆಗಳ ಸಂಕೇತವಾಗಿದೆ.
ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದಲ್ಲಿ ವಿಷಕಾರಿ ಅಂಶಗಳು ಸೇರಿಕೊಂಡು ವಾಂತಿ, ಅನ್ನ ತಿನ್ನಲು ತೊಂದರೆ, ದೇಹದ ತುರಿಕೆ ಸಾಮಾನ್ಯವಾಗಿರುತ್ತದೆ.