ಹೈ ಬಿಪಿ

ಹೈ ಬಿಪಿ ಅಧಿಕ ರಕ್ತದೊತ್ತಡವು ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ. ವೈದ್ಯರ ಪ್ರಕಾರ, ಕೆಲವು ಆಹಾರಗಳು ಬಿಪಿ ರೋಗಿಗಳಿಗೆ ವರದಾನವಿದ್ದಂತೆ. ಆ ಆಹಾರಗಳು ಯಾವುವು ಎಂದು ತಿಳಿಯಿರಿ.

Yashaswini V
Mar 17,2023

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಅಗತ್ಯವಾದ ಖನಿಜವಾಗಿದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಅರ್ಜಿನೈನ್ ಎಂಬ ಅಂಶವಿದ್ದು ಇದು ಹೈ ಬಿಪಿಯನ್ನು ನಿಯಂತ್ರಿಸುವಲ್ಲಿ ಸಹಕಾರಿ ಎಂದು ಸಾಬೀತುಪಡಿಸಲಿದೆ.

ಕಿವಿ

ಕಿವಿ ಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದನ್ನು ಅಧಿಕ ರಕ್ತದೊತ್ತಡ ಸಮಸ್ಯೆಯಿರುವ ರೋಗಿಗಳಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.

ಕಲ್ಲಂಗಡಿ

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲಿನ್ ಎಂಬ ಅಂಶವಿದೆ. ಇದು ಹೈ ಬಿಪಿಯನ್ನು ನಿಯಂತ್ರಿಸಲು ಸಹಾಯಕವಾದ ಅಮೈನೋ ಆಮ್ಲವಾಗಿದೆ.

ಚಿಯಾ ಸೀಡ್ಸ್

ಚಿಯಾ ಸೀಡ್ಸ್ ನಲ್ಲಿ ಪೊಟ್ಯಾಸಿಯಮ್, ಮೇಗ್ನಿಸಿಯಮ್, ಫೈಬರ್ ಕಂಡುಬರುತ್ತದೆ ಇದು ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್ ಮಾಡಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ.

ಸಿಹಿ ಗೆಣಸು

ಬೀಟಾ ಕ್ಯಾರೋಟಿನ್, ಕ್ಯಾಲ್ಸಿಯಂ ಮತ್ತು ಕರಗುವ ಫೈಬರ್ ನಲ್ಲಿ ಸಮೃದ್ದವಾಗಿರುವ ಸಿಹಿ ಗೆಣಸು ಹೈ ಬಿಪಿಯನ್ನು ನಿಯಂತ್ರಿಸಲು ಸಹಕಾರಿ ಆಗಿದೆ.

ಟೊಮಾಟೊ

ಪ್ರತಿ ಅಡುಗೆಮನೆಯಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ಟೊಮಾಟೊ ಸಹ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲ ಲೈಕೋಪೀನ್ ಎಂಬ ಅಂಶವನ್ನು ಹೊಂದಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story