ಈ ನಾಲ್ಕು ಸಸ್ಯದ ಎಲೆಗಳು ಆರೋಗ್ಯಕ್ಕೆ ಸಂಜೀವಿನಿ !

ಆರೋಗ್ಯಕ್ಕೆ ಲಾಭ

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಅನೇಕ ವಸ್ತುಗಳನ್ನು ಸೇವಿಸುತ್ತೇವೆ. ಆದರೆ ನಮ್ಮ ಸುತ್ತಲೂ ಇರುವ ಕೆಲವು ಸಸ್ಯಗಳ ಎಲೆಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಪೇರಳೆ ಎಲೆ

ಪೇರಳೆ ಎಲೆಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಇಫ್ಲಮೆಟರಿ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ದವಾಗಿದೆ.

ಪೇರಳೆ ಎಲೆಯ ಪ್ರಯೋಜನ

ಪೇರಳೆ ಎಲೆ ಸೇವನೆಯಿಂದ ಶರೀರದ ಊತ ಕಡಿಮೆಯಾಗುತ್ತದೆ. ಆರ್ಥರೈಟೀಸ್ ನೋವಿನಿಂದ ಪರಿಹಾರ ನೀಡುತ್ತದೆ.

ಪಾರಿಜಾತದ ಎಲೆ

ಪಾರಿಜಾತದ ಎಲೆಗಳು ನಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಪಾರಿಜಾತದ ಎಲೆಯ ಲಾಭ

ಇದರ ಸೇವನೆಯಿಂದ ಅಸ್ತಮಾ, ಮೈ ಕೈ ನೋವು, ಶೀತ ನೆಗಡಿ ಮುಂತಾದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ತುಳಸಿ ಎಲೆ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮನ್ನಣೆ ಇದೆ. ಇದು ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಸಹಾಯ ಮಾಡುತ್ತದೆ.

ತುಳಸಿ ಎಲೆಯ ಪ್ರಯೋಜನ

ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶೀತ, ನೆಗಡಿ, ಸ್ಟ್ರೆಸ್ ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ಬೇವಿನ ಎಲೆ

ಕಹಿ ಅಂಶ ಇರುವ ಎಲೆಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಔಷಧೀಯ ಗುಣ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಬೇವಿನ ಎಲೆಯ ಪ್ರಯೋಜನ

ಇದರ ಸೇವನೆಯಿಂದ ಮೊಡವೆ, ಎಲರ್ಜಿ, ರ್ಯಾಶಸ್ ಮುಂತಾದ ಸಮಸ್ಯೆಗಳು ದೂರವಾಗುತ್ತದೆ. ಇದು ಹಲ್ಲು ಮತ್ತು ವಸಡುಗಳ ನೋವಿನಿಂದಲೂ ಪರಿಹಾರ ನೀಡುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story