ಡಯಾಬಿಟೀಸ್ ನಿಯಂತ್ರಣಕ್ಕೆ ಬೆಸ್ಟ್ ಈ ಸೊಪ್ಪು

Ranjitha R K
Jun 26,2024

ಮಧುಮೇಹ ನಿಯಂತ್ರಣ ಹೇಗೆ ?

ಮಧುಮೇಹ ರೋಗಿಗಳು ಈ ಹಸಿರು ಎಲೆಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕರಿಬೇವು

ದಿನಕ್ಕೆ 10 ಕರಿಬೇವು ಎಲೆಗಳನ್ನು ಅಗಿದು ರಸ ಸೇವಿಸಿದರೆ ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಬೇವಿನ ಎಲೆಗಳು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಂಟ್ರೋಲ್ ನಲ್ಲಿ ಇರುತ್ತದೆ.

ಇನ್ಸುಲಿನ್ ಪ್ಲಾಂಟ್:

ಒಂದು ತಿಂಗಳ ಕಾಲ ಇನ್ಸುಲಿನ್ ಸಸ್ಯದ ಎಲೆಯನ್ನು ಅಗಿಯುತ್ತಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು.

ಸಬ್ಬಸಿಗೆ ಸೊಪ್ಪು :

ನಿಯಮಿತವಾಗಿ ಸಬ್ಬಸಿಗೆ ಸೊಪ್ಪು ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ.

ಅಲೋವೆರಾ :

ಅಲೋವೆರಾ ಎಲೆಗಳಿಂದ ತೆಗೆದ ಜೆಲ್ ಅನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಅನ್ನು ಕಡಿಮೆ ಮಾಡಬಹುದು.

ತುಳಸಿ ಎಲೆಗಳು

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2-3 ತುಳಸಿ ಎಲೆಗಳನ್ನು ಸೇವಿಸಿದರೆ ಶುಗರ್ ಕಡಿಮೆಯಾಗುತ್ತದೆ.

ಮಾವಿನ ಎಲೆಗಳು

10 ರಿಂದ 15 ಮಾವಿನ ಎಲೆಗಳನ್ನು ಕುದಿಸಿ ರಾತ್ರಿಯಿಡೀ ನೀರಿನಲ್ಲಿ ಹಾಗೆಯೇ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.


ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story