ತುಪ್ಪದಲ್ಲಿರುವ ಪೋಷಕ ತತ್ವ ಅತ್ಯಂತ ಪ್ರಯೋಜನಕಾರಿಯಾಗಿದೆ. ಕೆಲವರಿಗೆ ಇದೇ ಈ ಪೋಷಕ ತತ್ವ ಘಾತಕವಾಗಿ ಪರಿಣಮಿಸಬಹುದು.
ಲಿವರ್ ಸಿರೋಸಿಸ್, ಹೆಪಟುಮೆಗಾಲಿ, ಹೆಪಟೈಟಿಸ್ ಇತ್ಯಾದಿ ಯಕೃತ್ತಿನ ಕಾಯಿಲೆಗಳ ಸಂದರ್ಭದಲ್ಲಿ ತುಪ್ಪವನ್ನು ಸೇವಿಸುವಂತಿಲ್ಲ.
ತುಪ್ಪ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಜೀರ್ಣಕಾರಿ ಸಮಸ್ಯೆಗಳಿದ್ದರೆ ತುಪ್ಪವನ್ನು ಸೇವಿಸಬೇಡಿ.
ಜ್ವರದ ಸಂದರ್ಭದಲ್ಲಿ ತುಪ್ಪವನ್ನು ಸೇವಿಸಬಾರದು. ಅದರಲ್ಲಿಯೂ ಸೀಸನಲ್ ವೈರಲ್ ಫಿವರ್ ಇದ್ದಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
ಗರ್ಭಾವಸ್ಥೆಯಲ್ಲಿ ತುಪ್ಪ ತಿನ್ನುವುದು ಒಳ್ಳೆಯದಲ್ಲ. ವಿಶೇಷವಾಗಿ ನಿಮ್ಮ ತೂಕ ಹೆಚ್ಚುತ್ತಿರುವಾಗ ತುಪ್ಪ ಸೇವಿಸಲೇ ಬಾರದು.
ಕೊಲೆಸ್ಟ್ರಾಲ್ ಹೆಚ್ಚಿದ್ದರೂ ತುಪ್ಪ ಸೇವಿಸಬಾರದು. ಇದು ಕೊಲೆಸ್ಟ್ರಾಲ್ ಮತ್ತಷ್ಟು ಹೆಚ್ಚಾಗಲು ಕಾರಣವಾಗಬಹುದು.
ಜಾಂಡಿಸ್ ಆಗಿದ್ದರೂ ತುಪ್ಪ ಸೇವಿಸುವಂತಿಲ್ಲ. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಆಸಿಡ್ ರಿಫ್ಲೆಕ್ಸ್, ಅಲ್ಸರ್, ಸಿಡ್ನಿ ಸ್ಟೋನ್ ಮುಂತಾದ ಸಮಸ್ಯೆಗಳ ಸಂದರ್ಭದಲ್ಲಿಯೂ ತುಪ್ಪ ಸೇವಿಸಬಾರದು. ಇದರಿಂದ ನೋವು ಮತ್ತಷ್ಟು ಹೆಚ್ಚಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ