ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಅಗತ್ಯ ಪೋಷಕಾಂಶಗಳನ್ನ ಹೊಂದಿರುವ ಬೂದು ಕುಂಬಳಕಾಯಿಯು ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ದೇಹವನ್ನ ತಂಪಾಗಿಸುತ್ತದೆ.
ಬೂದು ಕುಂಬಳಕಾಯಿಯು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ.
ಬೂದು ಕುಂಬಳಕಾಯಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಂ, ತಾಮ್ರ & ಮ್ಯಾಂಗನೀಸ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ.
ಬೂದು ಕುಂಬಳಕಾಯಿಯು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನ ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನ ಹೆಚ್ಚಿಸುತ್ತದೆ.
ವಿಟಮಿನ್‌ಗಳು, ಖನಿಜಗಳು ಮತ್ತು ಆಹಾರದ ಫೈಬರ್‌ನಿಂದ ತುಂಬಿರುವ ಬೂದು ಕುಂಬಳಕಾಯಿ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ಬೂದು ಕುಂಬಳಕಾಯಿಯಲ್ಲಿ ಆಹಾರದ ಫೈಬರ್ ಹೆಚ್ಚಿರುವುದರಿಂದ, ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ
ಬೂದು ಕುಂಬಳಕಾಯಿ ಜ್ಯೂಸ್ ಸೇವನೆಯು ಮಲಬದ್ಧತೆ, ಗ್ಯಾಸ್ & ಅಸಿಡಿಟಿಯಂತಹ ಅಜೀರ್ಣ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.