ಒಡೆದ ತುಟಿಗಳಿಗೆ ಮನೆಮದ್ದು

ತೀವ್ರವಾದ ಪರಿಸರ ಪರಿಸ್ಥಿತಿಗಳಿಂದ ನಮ್ಮ ತುಟಿಗಳನ್ನು ರಕ್ಷಿಸಲು, ನಾವು ಸಾಮಾನ್ಯವಾಗಿ ಲಿಪ್ ಬಾಮ್ಸ್ ಎಂದು ಕರೆಯಲ್ಪಡುವ ಸೂತ್ರೀಕರಣಗಳನ್ನು ಅನ್ವಯಿಸುತ್ತೇವೆ. ಅವುಗಳು ನಮ್ಮ ತುಟಿಗಳನ್ನು ತೇವವಾಗಿಡಲು ಸಹಾಯ ಮಾಡುತ್ತವೆ.

Bhavishya Shetty
Feb 10,2023

ಲಿಪ್ ಬಾಮ್

ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಲಿಪ್ ಬಾಮ್ಗಳು ರಾಸಾಯನಿಕ ಪದಾರ್ಥಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ನೈಸರ್ಗಿಕವಾಗಿ ದೊರೆಯುವ ಮನೆಮದ್ದುಗಳನ್ನು ಬಳಸಿರಿ.

ತೆಂಗಿನೆಣ್ಣೆ

ತೆಂಗಿನೆಣ್ಣೆಯು ಹಲವಾರು ಗುಣಗಳನ್ನು ಹೊಂದಿದ್ದು, ಇದು ಲಿಪ್ ಬಾಮ್ ಆಗಿ ಬಳಸಲು ಸೂಕ್ತವಾಗಿದೆ. ಇದು ತುಟಿಗಳ ಚರ್ಮವನ್ನು ತೇವಗೊಳಿಸುತ್ತದೆ. ಶುಷ್ಕತೆಯನ್ನು ತಡೆಯುತ್ತದೆ

ಆಲಿವ್ ಎಣ್ಣೆ

ಚರ್ಮದ ಸಮಸ್ಯೆಗೆ ಆಲಿವ್ ಎಣ್ಣೆಯನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಆಲಿವ್ ಎಣ್ಣೆಯು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದು, ಉರಿಯೂತವನ್ನು ನಿವಾರಿಸುವುದು, ಮತ್ತು ಚರ್ಮದ ಪುನರುತ್ಪಾದನೆಯನ್ನು ಉತ್ತೇಜಿಸುವಂತಹ ಗುಣಲಕ್ಷಣಗಳನ್ನು ಹೊಂದಿದೆ.

ಜೇನುತುಪ್ಪ

ಜೇನುತುಪ್ಪವು ಚರ್ಮಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಪ್ರಯೋಜನಕಾರಿಯಾಗಿದೆ. ತ್ವಚೆಯ ಉತ್ಪನ್ನಗಳಲ್ಲಿ ಜೇನುತುಪ್ಪದ ಬಳಕೆಯು ವ್ಯಾಪಕವಾಗಿದೆ. ಜೇನುತುಪ್ಪವು ಒಡೆದ ತುಟಿಗಳ ಚರ್ಮವನ್ನು ಗುಣಪಡಿಸಲು ಬಳಸಬಹುದು.

ಬೆಣ್ಣೆ

ಬೆಣ್ಣೆಯು ಸಹ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಮದ್ದಾಗಿ ಉಪಯೋಗಿಸಲಾಗುತ್ತದೆ. ಚಳಿಗಾಲದಲ್ಲಿ ನಿಮ್ಮ ತುಟಿ ಆರೈಕೆಯ ಪ್ರತೀದಿನ ಬೆಣ್ಣೆ ಹಚ್ಚಿದರೆ ಉತ್ತಮ..

ಕೋಕಮ್ ಬೆಣ್ಣೆ

ಕೋಕಮ್ ಬೀಜಗಳು ಅಥವಾ ಪುನರ್ಪುಳಿ ಹಣ್ಣಿನ ಬೀಜಗಳಿಂದ ತಯಾರಿಸಿದ ಬೆಣ್ಣೆಯನ್ನು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಬಳಸಬಹುದು. ಇವು ಒಣ ಚರ್ಮ, ತುಟಿಗಳ ಬಿರುಕುಗಳನ್ನು ಹೋಗಲಾಡಿಸಲು ಬಳಸಲಾಗುತ್ತದೆ.

ಕೋಕೋ ಬೆಣ್ಣೆ

ಕೋಕೋ ಬೆಣ್ಣೆಯನ್ನು ತುಟಿಗಳಿಗೆ ಹಚ್ಚಿದರೆ, ಒಡೆದ ಗಾಯಗಳನ್ನು ಶೀಘ್ರವಾಗಿ ದೂರಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

VIEW ALL

Read Next Story