ಕೂದಲ ಆರೋಗ್ಯಕ್ಕೆ ಮನೆ ಮದ್ದು

ಪ್ರತಿಯೊಬ್ಬ ಹೆಣ್ಣು ಕೂಡಾ ತನ್ನ ಕೂದಲು ಸುಂದರವಾಗಿರಬೇಕು ಎಂದು ಬಯಸುತ್ತಾಳೆ. ಅದಕ್ಮಾಗಿ ವಿವಿಧ ರೀತಿಯ ಎಣ್ಣೆ, ಶಾಂಪೂ ಮೊರೆ ಹೋಗುತ್ತಾಳೆ.

Ranjitha R K
Jan 23,2023

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಆದರೆ ಬೇರೆ ಬೇರೆ ರೀತಿಯ ಹೇರ್ ಪ್ರಾಡಕ್ಟ್ ಬಳಸುವುದರಿಂದ ಕೂದಲು ನಿರ್ಜೀವವಾಗುತ್ತದೆ. ಉದುರಲು ಆರಂಭಿಸುತ್ತದೆ ಮಾತ್ರವಲ್ಲ ಬೆಳೆಯುವುದೂ ಇಲ್ಲ.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಉದ್ದವಾದ ಸುಂದರವಾದ ಕಪ್ಪು ಕುದಲಿಗಾಗಿ ಶಾಂಪೂ, ಎಣ್ಣೆಯ ಮೊರೆ ಹೋಗಬೇಕೆಂದಿಲ್ಲ. ಕೆಲವು ಮನೆ ಮದ್ದುಗಳನ್ನು ಬಳಸಿದರೆ ಸಾಕು.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಪ್ರೋಟಿನ್ ವಿಟಮಿನ್ ಬೀಟಾ ಕೇರಟೀನ್ ಹೊಂದಿರುವ ಕರಿಬೇವು ಬಳಸುವ ಮೂಲಕ ಕೂದಲನ್ನು ಬೇರಿನಿಂದಲೇ ಗಟ್ಟಿಯಾಗಿಸಬಹುದು.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ತೆಂಗಿನ ಎಣ್ಣೆಯಲ್ಲಿ ಕರಿಬೇವು ಸೇರಿಸಿ ಬಿಸಿ ಮಾಡಿಕೊಳ್ಳಿ. ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಸಮಯದಲ್ಲಿಯೇ ಪರಿಣಾಮ ಕಾಣಿಸುತ್ತದೆ.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಅಲೋವಿರಾದಲ್ಲಿರುವ ಪ್ರೋಟಿನ್ ಮತ್ತು ವಿಟಮಿನ್ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಆಲೋವಿರಾ ಜೆಲ್ ಅನ್ನು ಹಸಿ ಮೊಟ್ಟೆಯ ಜೊತೆ ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಹೀಗೆ ಮಾಡಿದರೆ ಕೂದಲು ಬೇಗನೆ ಬೆಳೆಯುತ್ತದೆ.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಮೆಂತ್ಯೆ ಬೀಜದಲ್ಲಿ ಕೂಡಾ ಪ್ರೋಟಿನ್ ಮತ್ತು ವಿಟಮಿನ್ ಕಂಡು ಬರುತ್ತದೆ. ಇದು ಕೂಡಾ ಕೂದಲ ಬೆಳವಣಿಗೆಗೆ ಸಹಕಾರಿ.

ಕೂದಲ ಆರೋಗ್ಯಕ್ಕೆ ಮನೆ ಮದ್ದು

ಮೆಂತ್ಯೆ ಬೀಜವನ್ನು ಪುಡಿ ಮಾಡಿ ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story