ಬೇಸಿಗೆಯಲ್ಲಿ ಮೊಸರು ಬೇಗನೆ ಹುಳಿಯಾಗದಂತೆ ಹೀಗೆ ಮಾಡಿ !
ಬೇಸಿಗೆಯಲ್ಲಿ ಬಹಳ ಬೇಗನೆ ಮೊಸರು ಹುಳಿಯಾಗುತ್ತದೆ. ಹುಳಿ ಮೊಸರು ತಿನ್ನಲು ಅಷ್ಟೊಂದು ರುಚಿಕರವಾಗಿ ಇರುವುದಿಲ್ಲ.
ಮೊಸರನ್ನು 35 ರಿಂದ 40 ಡಿಗ್ರಿ ಸೆಲಿಸಿಯಸ್ ತಾಪಮಾನದಲ್ಲಿ ಇಡುವುದು ಸೂಕ್ತ. ಹೆಚ್ಚಿನ ತಾಪಮಾನದಲ್ಲಿ ಮೊಸರು ಹುಳಿಯಾಗುತ್ತದೆ.
ಮೊಸರು ಮಾಡಲು ಇಡುವಾಗ ಕಡಿಮೆ ಪ್ರಮಾಣದಲ್ಲಿ ಹೆಪ್ಪು ಹಾಕಿ. ಹೆಪ್ಪು ಜಾಸ್ತಿ ಹಾಕಿದರೂ ಮೊಸರು ಹುಳಿಯಾಗುತ್ತದೆ.
ಮಣ್ಣಿನ ಪಾತ್ರೆಯಲ್ಲಿ ಮೊಸರು ಹಾಕಿಡಿ. ಮಣ್ಣಿನ ಪಾತ್ರೆ ಮೊಸರಿನ ನೀರನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಇದು ಹುಳಿಯಾಗುವುದನ್ನು ತಡೆಯುತ್ತದೆ.
ಹಾಲು ಮೊಸರಾದ ತಕ್ಷಣ ಅದನ್ನು ಫ್ರಿಜ್ ನಲ್ಲಿ ಇಡಿ. ಫ್ರಿಜ್ ನಲ್ಲಿ ಇಟ್ಟರೆ ಮೊಸರು ಹುಳಿ ಬರುವುದಿಲ್ಲ.
ಮೊಸರು ಮಾಡಿದ ಕೂಡಲೇ ಅದನ್ನು ಬಟ್ಟೆಯಿಂದ ಮುಚ್ಚಿಡಿ.
ಮೊಸರನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಗಾಳಿ ತಾಕದೆ ಮೊಸರು ಹುಳಿಯಾಗುವುದಮ್ಮು ತಡೆಯುತ್ತದೆ.
( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಅನುಮೋದಿಸುವುದಿಲ್ಲ.)