ಸೇಬು ತಾಜಾ ಮತ್ತು ಸಿಹಿಯಾಗಿದೆಯೇ ಎಂದು ಹೀಗೆ ತಿಳಿಯಿರಿ

Ranjitha R K
Feb 20,2025


ಮಾರುಕಟ್ಟೆಯಿಂದ ಸೇಬುಗಳನ್ನು ಖರೀದಿಸುವಾಗ ಸಿಹಿ ಮತ್ತು ಉತ್ತಮವಾದ ಸೇಬುಗಳನ್ನು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡುವ ಟ್ರಿಕ್ಸ್ ಇಲ್ಲಿದೆ.


ಜಾಸ್ತಿ ತೂಕ ಇರುವ ಸೇಬನ್ನು ಯಾವತ್ತೂ ಖರೀದಿಸಲೇ ಬೇಡಿ.


ಸೇಬು ಖರೀದಿಸುವಾಗ ಅದರ ಗುಣಮಟ್ಟಕ್ಕೆ ಒತ್ತು ನೀಡಬೇಕು,


ರುಚಿಕರ ಮತ್ತು ಒಳ್ಳೆಯ ಸೇಬು ಪೂರ್ತಿ ಕೆಂಪು ಬಣ್ಣದ್ದಾಗಿರುವುದಿಲ್ಲ.ಅದು ಸ್ವಲ್ಪ ಕೆಂಪು ಮತ್ತು ಸ್ವಲ್ಪ ಹಸಿರು ಬಣ್ಣದ್ದಾಗಿರುತ್ತದೆ.


ಸೇಬು ಸಿಹಿಯಾಗಿರುವುದೇ ಇಲ್ಲವೇ ಎನ್ನುವುದನ್ನು ಅದರ ಪರಿಮಳದ ಮೂಲಕ ಪತ್ತೆ ಹಚ್ಚಬಹುದು.


ಸೇಬನ್ನು ಫ್ರಿಜ್ ನಲ್ಲಿಟ್ಟರೆ ಅದು ಬಹಳ ಬೇಗನೆ ಕೆಡುತ್ತದೆ. ಆದರೆ ಪೇಪರ್ ನಲ್ಲಿ ಸರಿಯಾಗಿ ಸುತ್ತಿ ಸೇಬನ್ನು ಫ್ರಿಜ್ ನಲ್ಲಿಟ್ಟರೆ ಏನೂ ಆಗುವುದಿಲ್ಲ.


ಹೆಚ್ಚಿನ ಸಂಖ್ಯೆಯಲ್ಲಿ ಸೇಬನ್ನು ಖರೀದಿಸಿ ತಂದಿದ್ದರೆ ಅದನ್ನು ಪೇಪರ್ ಅಥವಾ ಕ್ರಾಫ್ಟ್ ಪೇಪರ್ ನಲ್ಲಿ ಸುತ್ತಿ ಸ್ಟೋರ್ ಮಾಡಬಹುದು.


ಸೇಬನ್ನು ತುಂಡು ಮಾಡಿದಾಗ ಅದು ಎನ್ಜಾಯಿನ್ ಆಕ್ಸಿಜನ್ ಸಂಪರ್ಕಕ್ಕೆ ಬರುತ್ತದೆ. ಹೀಗಾದಾಗ ಇದು ನಿಧಾನವಾಗಿ ಆಕ್ಸಿಡೆಶನ್ ಪ್ರಕ್ರಿಯೆ ಶುರು ಮಾಡುತ್ತದೆ, ಹಾಗಾಗಿ ಸೇಬು ಖರೀದಿಸುವಾಗ ಕತ್ತರಿಸಿದ ಸೇಬನ್ನು ಖರೀದಿಸಬೇಡಿ,


ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.

VIEW ALL

Read Next Story