ಪ್ರತಿ ಬಾರಿ ಚಪಾತಿ ಮಾಡುವಾಗಲೂ ಸಾಫ್ಟ್ ಆಗಿ ಬರಬೇಕು ಎಂದರೆ ಈ ಕೆಳಗಿನ ಟಿಪ್ಸ್ ಅನ್ನು ಅನುಸರಿಸಬೇಕು
ಚಪಾತಿ ಮಾಡುವ ಮುನ್ನ ಹಿಟ್ಟನ್ನು ಜರಡಿ ಮಾಡಿಕೊಳ್ಳುವುದು ಬಹಳ ಮುಖ್ಯ.
ಹಿಟ್ಟು ಕಲಸುವಾಗ ಒಮ್ಮೆಲೇ ಹೆಚ್ಚು ನೀರು ಹಾಕಬಾರದು. ಅಗತ್ಯಕ್ಕೆ ಅನುಸರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಬರಬೇಕು.
ಒಮ್ಮೆ ಕಲಸಿದ ಹಿಟ್ಟನ್ನು ಅರ್ಧ ಗಂಟೆವರೆಗೆ ಹಾಗೆಯೆ ಮುಚ್ಚಿ ಇಡಬೇಕು.
ಚಪಾತಿಯನ್ನು ಕಾವಲಿಗೆ ಹಾಕುವ ಮುನ್ನ ಕಾವಲಿ ಸರಿಯಾಗಿ ಬಿಸಿಯಾಗಿದೆಯೇ ನೋಡಿಕೊಳ್ಳಿ. ನಂತರ ಗ್ಯಾಸ್ ಉರಿಯನ್ನು ಮೀಡಿಯಂ ಫ್ಲೇಮ್ ನಲ್ಲಿಟ್ಟು ಚಪಾತಿ ಕಾಯಿಸಿ.
ಕಾವಲಿಯಲ್ಲಿ ಬೇಯಿಸಿದ ನಂತರ ನೇರವಾಗಿ ಬೆಂಕಿಯ ಮೇಲೆ ಹಾಕಿ, ಇದರಿಂದ ಚಪಾತಿ ಉಬ್ಬಿ ಬರುತ್ತದೆ.
ಚಪಾತಿ ಲಟ್ಟಿಸುವಾಗಲೂ ಹೆಚ್ಚು ಹಿಟ್ಟು ಅದನ್ನು ಚಪಾತಿ ಮಣೆ ಮೇಲೆ ಬಿಡಬಾರದು.
ಚಪಾತಿ ಮಾಡುತ್ತಿರುವಾಗ ಮಧ್ಯೆ ಮಧ್ಯೆ ಕಾವಲಿಯನ್ನು ಬಟ್ಟೆಯಿಂದ ಒರೆಸುತ್ತಿರಬೇಕು. ಹೀಗೆ ಮಾಡಿದರೆ ಅದರಲ್ಲಿ ಅಂಟಿಕೊಂಡಿರುವ ಹಿಟ್ಟು ಹೋಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಇವುಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. Zee KANNADA NEWS ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ