ಆರೋಗ್ಯಕ್ಕೆ ಕುಂಬಳಕಾಯಿಯ ಟಾಪ್ 10 ಪ್ರಯೋಜನಗಳು

Yashaswini V
Nov 21,2023

ಶ್ವಾಸಕೋಶದ ಕ್ಯಾನ್ಸರ್‌

ಕುಂಬಳಕಾಯಿಯಲ್ಲಿ, ಬೀಟಾ-ಕ್ರಿಪ್ಟೋಕ್ಸಾಂಥಿನ್ ಮತ್ತು ವಿವಿಧ ಕ್ಯಾರೊಟಿನಾಯ್ಡ್‌ಗಳಂತಹ ಸಂಯುಕ್ತಗಳು ಕಂಡು ಬರುತ್ತವೆ. ಇದು ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಸ್ತಮಾ

ಕುಂಬಳಕಾಯಿಯ ಉತ್ಕರ್ಷಣ ನಿರೋಧಕ ಶಕ್ತಿಯು ಸೋಂಕುಗಳ ವಿರುದ್ಧ ಉಸಿರಾಟದ ವ್ಯವಸ್ಥೆಗೆ ರಕ್ಷಣೆ ನೀಡುತ್ತದೆ. ಇದನ್ನು ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ ಎನ್ನಲಾಗುತ್ತದೆ.

ಸ್ನಾಯು

ಕುಂಬಳಕಾಯಿಯಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ಇದು ಸ್ನಾಯುವನ್ನು ಬಳಪಡಿಸುತ್ತದೆ.

ಹೃದ್ರೋಗ

ಉತ್ಕರ್ಷಣ ನಿರೋಧಕಗಳಲ್ಲಿ ಹೇರಳವಾಗಿರುವ ಕುಂಬಳಕಾಯಿಯು ಅಪಧಮನಿಕಾಠಿಣ್ಯವನ್ನು ತಡೆಯಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ.

ರೋಗನಿರೋಧಕ ಶಕ್ತಿ

ಕುಂಬಳಕಾಯಿಯು ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿದ್ದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಳಪಡಿಸುತ್ತದೆ.

ಮೂತ್ರವರ್ಧಕ

ಕುಂಬಳಕಾಯಿಯು ಗಮನಾರ್ಹವಾದ ನಿರ್ವಿಶೀಕರಣ ಆಹಾರವಾಗಿದೆ. ಇದರ ನೈಸರ್ಗಿಕ ಮೂತ್ರವರ್ಧಕ ಗುಣವು ಹಾನಿಕಾರಕ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಒತ್ತಡ

ಕುಂಬಳಕಾಯಿಯು ಎಲ್-ಟ್ರಿಪ್ಟೊಫಾನ್‌ನ ಶ್ರೀಮಂತ ಮೂಲವಾಗಿದ್ದು ಇದು ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಣ್ಣಿನ ಆರೋಗ್ಯ

ಕುಂಬಳಕಾಯಿಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದರ ಸೇವನೆಯಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಮೂಳೆಗಳ ಬೆಳವಣಿಗೆ

ಕುಂಬಳಕಾಯಿಯಲ್ಲಿ ವಿಟಮಿನ್ ಕೆ ಕಂಡು ಬರುತ್ತದೆ. ಹಾಗಾಗಿ ಕುಂಬಳಕಾಯಿ ಸೇವನೆಯು ಮೂಳೆಗಳ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.

ತೂಕ ಇಳಿಕೆ

ಕುಂಬಳಕಾಯಿ ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರು ಇದನ್ನು ತಮ್ಮ ಆಹಾರದಲ್ಲಿ ಸೇರಿಸುವುದರಿಂದ ಪ್ರಯೋಜನಕಾರಿ ಎನ್ನಲಾಗುತ್ತದೆ.

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story