ಟಾಪ್ 10 ಲಿವರ್ ಸ್ನೇಹಿ ಆಹಾರಗಳಿವು
ನಿತ್ಯ ಒಂದೆರಡು ಬಾದಾಮಿ, ಪಿಸ್ತಾದಂತಹ ನಟ್ಸ್ ಸೇವನೆಯು ಲಿವರ್ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿವೆ.
ಯಕೃತ್ತಿನ ಸ್ನೇಹಿ ಆಹಾರಗಳ ಪಟ್ಟಿಯಲ್ಲಿ ದ್ರಾಕ್ಷಿಗಳು ಪ್ರಮುಖವಾಗಿದೆ. ಅದರಲ್ಲೂ ಫ್ಯಾಟಿ ಲಿವರ್ ಸಮಸ್ಯೆ ಇರುವವರಿಗೆ ಇದು ಅದ್ಭುತ ಔಷಧಿಯಾಗಿದೆ.
ಬೀಟ್ರೂಟ್ ಜ್ಯೂಸ್, ಬೀಟಾಲೈನ್‌ಗಳನ್ನು ಒಳಗೊಂಡಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಮತ್ತು ಯಕೃತ್ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿ ಆಗಿದೆ.
ಕಾಫಿ ಯಕೃತ್ತಿನ ಕ್ಯಾನ್ಸರ್ ನಿವಾರಣೆಯಲ್ಲಿ ಸಹಕಾರಿ ಎಂದು ಹೇಳಲಾಗುತ್ತದೆ.
ಫೈಬರ್‌ಗಳಲ್ಲಿ ಸಮೃದ್ಧವಾಗಿರುವ ಹಸಿರು ಸೊಪ್ಪಿನ ಸೇವನೆಯು ಯಕೃತ್ತಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
ಬೆಳ್ಳುಳ್ಳಿ ಯಕೃತ್ತಿನ ಆರೋಗ್ಯಕ್ಕೆ ಮತ್ತೊಂದು ಅತ್ಯುತ್ತಮ ಆಹಾರ.
ಗ್ರೀನ್ ಟೀ ಸೇವನೆಯು ಯಕೃತ್ತಿನ ಕ್ಯಾನ್ಸರ್ ತಡೆಗಟ್ಟುವಿಕೆ ಸೇರಿದಂತೆ ಯಕೃತ್ ಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಉತ್ಕರ್ಷಣ ನಿರೋಧಕಗಳಲ್ಲಿ ಹೇರಳವಾಗಿರುವ ಆಲಿವ್ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ, ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದೂ ಕೂಡ ಲಿವರ್ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.
ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಕೊಬ್ಬಿನ ಮೀನುಗಳು ಕೂಡ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ.
ಓಟ್ ಮೀಲ್‌ನಲ್ಲಿ ಕಂಡುಬರುವ ಬೀಟಾ-ಗ್ಲುಕನ್, ಯಕೃತ್ತಿನ ಹಾನಿ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.