ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕರು ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಾರೆ.
ಅನೇಕರಿಗೆ ರಾತ್ರಿ ನಿದ್ರೆ ಬರದೆ ಹಾಸಿಗೆಯಲ್ಲಿಯೇ ಚಡಪಡಿಸುತ್ತಾ ಇರುತ್ತಾರೆ.
ಸರಿಯಾಗಿ ನಿದ್ದೆ ಬರದವರಿಗೆ ನಾವು ಇಂದು ನೈಸರ್ಗಿಕ ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ.
ರಾತ್ರಿ ಮಲಗುವ ವೇಳೆ ನಿಮ್ಮ ದಿಂಬಿನ ಕೆಳಗೆ ಸಿಪ್ಪೆ ತೆಗೆದ ಬೆಳ್ಳುಳ್ಳಿ ಎಸಳನ್ನು ಇಡಬೇಕು.
ಬೆಳ್ಳುಳ್ಳಿ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜವಾಗಿ ನಿದ್ದೆ ಬರುತ್ತದೆ.
ರಾತ್ರಿ ಜೀರ್ಣಾಂಗ ವ್ಯವಸ್ಥೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡರೆ, ಒಂದೆರಡು ಬೆಳ್ಳುಳ್ಳಿ ಎಸಳನ್ನು ತಲೆ ದಿಂಬಿನಡಿ ಇಟ್ಟರೆ ಚೆನ್ನಾಗಿ ಜೀರ್ಣವಾಗುತ್ತದೆ.
ಮನೆಯಲ್ಲಿ ಕೀಟಗಳು ಮತ್ತು ಸೊಳ್ಳೆಗಳು ಇದ್ದರೂ ಬೆಳ್ಳುಳ್ಳಿ ವಾಸನೆಗೆ ಸಮೀಪ ಸುಳಿಯದು.
ನೆಗಡಿ, ಕೆಮ್ಮು ಶ್ವಾಸಕೋಶದ ಸಮಸ್ಯೆಗೆ ಒಂದೆರಡು ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟು ಮಲಗಿದ್ರೆ ಸಮಸ್ಯೆಗಳು ದೂರವಾಗುತ್ತದೆ.