ಬದಲಾದ ವಾತಾವರಣದಲ್ಲಿ ಶೀತ, ನೆಗಡಿ ಒಂದು ಸಾಮಾನ್ಯ ಸಮಸ್ಯೆ. ಇದರಿಂದ ಉಸಿರಾಟಕ್ಕೂ ತೊಂದರೆ ಆಗಬಹುದು. ಇದನ್ನು ತಪ್ಪಿಸಲು ಔಷಧಿಗಳ ಮೊರೆ ಹೋಗುವ ಬದಲಿಗೆ ಕೆಲವು ಮನೆಮದ್ದುಗಳನ್ನು ಕೂಡ ಟ್ರೈ ಮಾಡಬಹುದು.
ಮೂಗಿನ ದಟ್ಟಣೆ ಸಮಸ್ಯೆಯಿಂದ ಪರಿಹಾರ ಪಡೆಯಲು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ವಿಧಾನವೆಂದರೆ ಸ್ಟೀಮ್ ತೆಗೆದುಕೊಳ್ಳುವುದು.
ಮೆಣಸು, ಬೆಳ್ಳುಳ್ಳಿ, ಶುಂಠಿ ಮತ್ತು ಇತರ ಮಸಾಲೆಗಳು ಔಷಧೀಯ ಗುಣಗಳನ್ನು ಹೊಂದಿದ್ದು ಅದು ಶೀತಗಳಿಗೆ ಚಿಕಿತ್ಸೆ ನೀಡಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ. ಬೆಚ್ಚಗಿನ ನೀರಿನೊಂದಿಗೆ ಈ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಶೀತದಿಂದ ಸುಲಭ ಪರಿಹಾರ ಪಡೆಯಬಹುದು.
ಮೂಗಿನ ದಟ್ಟಣೆಯಿಂದ ತ್ವರಿತ ಪರಿಹಾರಕ್ಕಾಗಿ ಮತ್ತೊಂದು ಸರಳ ಪರಿಹಾರವೆಂದರೆ ಕರಿಮೆಣಸು. ಕರಿಮೆಣಸಿನ ಬೀಜಗಳನ್ನು ಪುಡಿಮಾಡಿ ಇದನ್ನು ಹಾಲಿಗೆ ಬೆರೆಸಿ ಸವಿಯುವುದು.
ತಾಜಾ ಶುಂಠಿ, ಮೆಣಸು, ಜೀರಿಗೆ, ಸಣ್ಣ ಈರುಳ್ಳಿಯಂತಹ ಗಿಡಮೂಲಿಕೆ ಪದಾರ್ಥಗ್ಲಿಂದ ತಯಾರಿಸಿದ ಚಹಾ ಕೂಡ ಶೀತದಿಂದ ತ್ವರಿತ ಪರಿಹಾರ ನೀಡಬಲ್ಲದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.