ಮೂಲವ್ಯಾಧಿಯಿಂದ ಗುದದ್ವಾರದಲ್ಲಿ ನೋವು, ತುರಿಕೆ ಉಂಟಾಗಿ ಕಿರಿಕಿರಿಯಾಗುತ್ತದೆ.
ದೀರ್ಘಕಾಲದ ಮಲಬದ್ಧತೆಯು ಹೆಮರಾಯಿಡ್ಸ್ ಅಥವಾ ಫೈಲ್ಸ್ ಗೆ ಕಾರಣವಾಗಬಹುದು.
ನೀವು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
ಅಂಜೂರದಿಂದ ಮೂಲವ್ಯಾಧಿಗೆ ಪರಿಹಾರ ಸಿಗುವುದು. 2-3 ಅಂಜೂರದ ಹಣ್ಣುಗಳನ್ನ ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಗ್ಗೆ ಅವುಗಳನ್ನು ಸೇವಿಸಬೇಕು.
ದಿನನಿತ್ಯದ ತರಕಾರಿಗಳಲ್ಲಿ ಇಂಗು ಸೇರಿಸಬಹುದು ಅಥವಾ ಒಂದು ಲೋಟ ನೀರಿನಲ್ಲಿ ಕರಗಿಸಿ ಪ್ರತಿದಿನ ಸೇವಿಸಬೇಕು. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮೂಲವ್ಯಾಧಿಯನ್ನ ಗುಣಪಡಿಸುತ್ತದೆ.
ಬೆಳಗ್ಗೆ ಎದ್ದಾಗ ಒಂದು ಕಪ್ ಹಾಲಿಗೆ ನಿಂಬೆ ರಸವನ್ನು ಸೇರಿಸಿ ತಕ್ಷಣ ಕುಡಿಯಿರಿ. ಹಾಲಿಗೆ ನಿಂಬೆ ರಸ ಬೆರೆಸಿದ ಬಳಿಕ ಸ್ವಲ್ಪವೂ ತಡಮಾಡಬಾರದು.
ಲವಂಗ ತೈಲದ ಬಳಕೆ ಕೂಡ ಪೈಲ್ಸ್ ಸಮಸ್ಯೆಯಲ್ಲಿ ತುಂಬಾ ಪ್ರಯೋಜನಕಾರಿ. ಪೈಲ್ಸ್ ಪೀಡಿತ ಜಾಗಕ್ಕೆ ಲವಂಗದ ಎಣ್ಣೆ ಹಚ್ಚಿದರೆ ತ್ವರಿತ ಪರಿಹಾರ ಸಿಗುತ್ತದೆ.