ಔಷಧೀಯ ಗುಣಗಳಿಂದ ಸಂಪದ್ಭರಿತವಾದ 'ತುಳಸಿ' ಆರೋಗ್ಯಕ್ಕೆ ವರದಾನ

Yashaswini V
May 28,2025

ತುಳಸಿ

ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯವು ಅಪಾರ ಪ್ರಮಾಣದ ಔಷಧೀಯ ಗುಣಗಳಿಂದ ಸಂಪದ್ಭರಿತವಾಗಿದ್ದು ಆರೋಗ್ಯಕ್ಕೆ ವರದಾನವಾಗಿದೆ.

ತುಳಸಿಯಲ್ಲಿರುವ ಪೋಷಕಾಂಶಗಳು

ತುಳಸಿ ಸಸ್ಯವು ವಿಟಮಿನ್ ಎ, ಸಿ, ಕೆ, ಕಬ್ಬಿಣಾಂಶ, ಕ್ಯಾಲ್ಸಿಯಂ, ರಂಜಕ, ಮೆಗ್ನೀಷಿಯಂ, ಪೊಟ್ಯಾಷಿಯಂನಂತಹ ಅತ್ಯುತ್ತಮ ಖನಿಜಗಳ ಮೂಲವಾಗಿದೆ.

ತುಳಸಿ ಸೇವನೆ

ಫೈಬರ್ ಮತ್ತು ಪ್ರೋಟಿನ್ಸ್​ಗಳಿಂದ ಹೇರಳವಾಗಿರುವ ತುಳಸಿ ಸಸ್ಯದ ಎಲೆಗಳನ್ನು ನೇರವಾಗಿ ಹಾಗೆಯೇ ತಿನ್ನಬಹುದು. ಇಲ್ಲವೇ ಚಹಾ ತಯಾರಿಸಿ ಕುಡಿಯಬಹುದು. ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳೆಂದರೆ...

ಕಣ್ಣಿನ ಆರೋಗ್ಯ

ಪ್ರತಿ ಮನೆಯಲ್ಲಿ ತುಳಸಿ ಇದ್ದೇ ಇರುತ್ತದೆ. ತುಳಸಿಯೊಂದಿಗೆ ಸಣ್ಣ-ಪುಟ್ಟ ಹಸಿರು ಗಿಡಗಳನ್ನು ಬೆಳೆಸುವುದರಿಂದ ಅವುಗಳನ್ನು ನಿತ್ಯ ನೋಡುವುದರಿದ್ನ ಕಣ್ಣಿನ ಆರೋಗ್ಯಕ್ಕೆ ಉತ್ತಮ.

ಒತ್ತಡ ನಿವಾರಣೆ

ತುಳಸಿ ಎಲೆಗಳ ಚಹಾ ತಯಾರಿಸಿ ಕುಡಿಯುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ.

ಮೆದುಳಿನ ಆರೋಗ್ಯ

ತುಳಸಿ ಸೇವನೆಯು ಮೆದುಳಿನಲ್ಲಿ ಡೋಪಮೈನ್ ಹಾಗೂ ಸಿರೊಟೋನಿನ್ ಮಟ್ಟವನ್ನು ಸಮತೋಲನ ಗೊಳಿಸುವುದರಿಂದ ಹೆದರಿಕೆ, ಭಯ ನಿವಾರಣೆಯಾಗುತ್ತದೆ. ಇದರಿಂದ ಮೆದುಳಿನ ಆರೋಗ್ಯ ಸುಧಾರಿಸುತ್ತದೆ.

ಬ್ಯಾಕ್ಟೀರಿಯಾ ವಿರೋಧಿ

ತುಳಸಿ ಎಲೆಗಳಲ್ಲಿ ವಿಟಮಿನ್ ಸಿ, ಸತು ಸಮೃದ್ಧವಾಗಿದ್ದು ಇದು ಬ್ಯಾಕ್ಕೀರಿಯಾ ಮತ್ತು ಶಿಲೀಂಧ್ರ ವಿರೋಧಿಯಾಗಿ ದೇಹಕ್ಕೆ ರಕ್ಷಣೆ ನೀಡುತ್ತದೆ.

ನಿದ್ರಾಹೀನತೆ

ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಖಿನ್ನತೆ ನಿವಾರಣೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story