ಅರಿಶಿನವು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಅರಿಶಿನ ಬಳಕೆಯಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಬಹುದು. ಅವುಗಳೆಂದರೆ...
ತೂಕ ಇಳಿಕೆಗಾಗಿ ಕೆಲವರು ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುತ್ತಾರೆ. ಆದರೆ, ಇದಕ್ಕೆ ಸ್ವಲ್ಪ ಅರಿಶಿನ ಬೆರೆಸಿದರೆ ಇನ್ನೂ ಹೆಚ್ಚಿನ ಪ್ರಯೋಜನವಾಗಲಿದೆ.
ಉಗುರುಬೆಚ್ಚಗಿನ ನೀರಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಮೆದುಳು ಚುರುಕಾಗುತ್ತದೆ.
ಪ್ರತಿನಿತ್ಯ ಅರಿಶಿನ ನೀರನ್ನು ಕುಡಿದರೆ ರಕ್ತ ಶುದ್ಧೀಕರಣವಾಗುತ್ತದೆ.
ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅರಿಶಿನದ ನೀರು ವರದಾನಕ್ಕಿಂತ ಕಡಿಮೆಯಿಲ್ಲ.
ನಿತ್ಯ ಅರಿಶಿನದ ನೀರು ಕುಡಿಯುವುದರಿಂದ ಹೃದಯ ಸಂಬಂಧಿತ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.