ಅರಿಶಿನವು ಹಲವಾರು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕ ಔಷಧವಾಗಿ ಅರಿಶಿನವನ್ನ ಬಳಸಲಾಗುತ್ತಿದೆ.
ಅರಿಶಿಣ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.
ಅರಿಶಿನದಲ್ಲಿ ಫೈಬರ್, ವಿಟಮಿನ್ ಸಿ, ಇ ಮತ್ತು ಕೆ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳಿವೆ.
ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಅರಿಶಿನದ ನೀರು ಕುಡಿದರೆ ದೇಹದಲ್ಲಿನ ರಕ್ತವನ್ನ ಶುದ್ದಿಗೊಳಿಸುತ್ತದೆ.
ಅರಿಶಿನದ ನೀರು ಸೇವನೆಯು ಮೆದುಳಿನ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತದೆ.
ಉಗುರು ಬೆಚ್ಚಗಿನ ಹಾಲಿನಲ್ಲಿ ಅರಿಶಿನ ಸೇರಿಸಿ ಕುಡಿದರೇ ಸ್ವಲ್ಪ ಮಟ್ಟಿಗೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಪರಿಣಾಮಕಾರಿಯಾಗಿದೆ.