ಹೊಟ್ಟೆ, ಕೈ , ಬೆನ್ನ ಸುತ್ತ ಸ್ಟ್ರೆಚ್ ಮಾರ್ಕ್ ಇದ್ದು ಇದನ್ನು ನಿವಾರಿಸಬೇಕಾದರೆ ಸುಲಭವಾದ ಮನೆ ಮದ್ದು ಇಲ್ಲಿದೆ.
ಒಮ್ಮೆಲೇ ದೇಹ ತೂಕ ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುತ್ತದೆ.
ಸೊಂಟ, ಎದೆಯ ಭಾಗ, ಕಾಲು, ಕೈ ಇಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿ ಶೇಖರಣೆಯಾದಾಗ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುತ್ತದೆ.
ನಿಮ್ಮ ದೇಹದ ಯಾವುದೇ ಭಾಗದಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣದ ರೇಖೆಗಳು ಕಾಣಿಸಿಕೊಂಡರೆ ಸ್ಟ್ರೆಚ್ ಮಾರ್ಕ್ ಮೂಡುತ್ತಿದೆ ಎಂದರ್ಥ.
ಯಾವುದೇ ಕ್ರೀಂ, ಲೋಶನ್, ಥೆರಪಿ ಮತ್ತು ಮನೆ ಮದ್ದಿನಿಂದ ಸ್ಟ್ರೆಚ್ ಮಾರ್ಕ್ ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಅದನ್ನು ಕಡಿಮೆ ಮಾಡಬಹುದು.
ಸ್ನಾನ ಮಾಡುವ ನೀರಿಗೆ ನಿಂಬೆ ರಸ ಬೆರೆಸಿ ಸ್ನಾನಕ್ಕೆ ಬಳಸಿದರೆ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ.
ಸ್ಟ್ರೆಚ್ ಮಾರ್ಕ್ ಮೂಡುವ ಸುಳಿವು ಸಿಗುತ್ತಿದ್ದಂತೆಯೇ ಅದನ್ನು ಮಂದ ಮಾಡುವ ಕ್ರಮವನ್ನು ತೆಗೆದುಕೊಳ್ಳಬೇಕು.
ನಿಂಬೆ ರಾದಲ್ಲಿ ವಿಟಮಿನ್ ಸಿ ಇರುತ್ತದೆ. ಇದರಿಂದಾಗಿ ನಿಂಬೆ ರಸ ಬಳಸಿದರೆ ಸ್ಟ್ರೆಚ್ ಮಾರ್ಕ್ ಅನ್ನು ಮಂದ್ ಮಾಡಬಹುದು. ಆದರೆ ಸಂಪೂರ್ಣ ಹೋಗಲಾಡಿಸುವುದು ಸಾಧ್ಯವಿಲ್ಲ.