ತುಳಸಿ ಸಸ್ಯವನ್ನು ಭಾರತದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ತುಳಸಿಯನ್ನು ಪ್ರತೀ ಹಿಂದೂಗಳ ಮನೆ ಮುಂದೆ ನೆಡಲಾಗುತ್ತದೆ.
ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದು ಕೆಮ್ಮು ಮತ್ತು ಶೀತದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ತುಳಸಿಯ ಒಣ ಎಲೆಗಳನ್ನು ಎಂದಿಗೂ ಕಸದ ಬುಟ್ಟಿಗೆ ಎಸೆಯಬೇಡಿ. ಏಕೆಂದರೆ ಅದೂ ಕೂಡ ಆಯುರ್ವೇದದ ನಿಧಿ ಎಂದು ಕರೆಯಲ್ಪಡುತ್ತದೆ.
ಒಣಗಿದ ತುಳಸಿ ಎಲೆಗಳನ್ನು ಬಟ್ಟಲಿನಲ್ಲಿ ಸಂಗ್ರಹಿಸಿ. ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಸೇವಿಸಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಒಣ ತುಳಸಿ ಎಲೆಗಳನ್ನು ಪುಡಿ ಮಾಡಿ ಅನೇಕ ಪಾಕವಿಧಾನಗಳಲ್ಲಿ ಬಳಕೆ ಮಾಡಬಹುದು. ಇದು ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ.
ಸಲಾಡ್ ಅಥವಾ ಪಿಜ್ಜಾಕ್ಕೆ ಉತ್ತಮ ರುಚಿಯನ್ನು ನೀಡಲು ನೀವು ಒಣಗಿದ ತುಳಸಿ ಎಲೆಗಳನ್ನು ಬಳಸಬಹುದು.
ಒಣಗಿದ ತುಳಸಿ ಎಲೆಗಳನ್ನು ಗೊಬ್ಬರವಾಗಿಯೂ ಬಳಸಬಹುದು. ಕೈಗಳಿಂದ ಪುಡಿಮಾಡಿ ಮಣ್ಣಿನೊಂದಿಗೆ ಮಿಶ್ರಣ ಮಾಡಿದರೆ ಗಿಡಗಳಿಗೆ ಉತ್ತಮ.