ದಾಳಿಂಬೆ ಸಿಪ್ಪೆಯ ಸಹಾಯದಿಂದ ನೀವು ಮೂಲದಿಂದ ಮೊಡವೆಗಳನ್ನು ತೊಡೆದುಹಾಕಬಹುದು. ದಾಳಿಂಬೆ ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದರಿಂದಾಗಿ ನಿಮ್ಮ ಮುಖದ ಟ್ಯಾನಿಂಗ್ ಅನ್ನು ತೆಗೆದುಹಾಕುವ ಮೂಲಕ ಮೈಬಣ್ಣವನ್ನು ಸುಧಾರಿಸಬಹುದು.
ಸನ್ಸ್ಪಾಟ್ಗಳು ಮತ್ತು ಪಿಗ್ಮೆಂಟೇಶನ್ನಂತಹ ಸಮಸ್ಯೆಗಳಿಗೆ ದಾಳಿಂಬೆ ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕೆ ದಾಳಿಂಬೆ ಸಿಪ್ಪೆಯ ಫೇಸ್ ಮಾಸ್ಕ್ ಬಳಸುವುದು ಉತ್ತಮ
ದಾಳಿಂಬೆ ಸಿಪ್ಪೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅವುಗಳನ್ನು ನೀರು ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ. ಈ ನೀರನ್ನು ಚೆನ್ನಾಗಿ ಫಿಲ್ಟರ್ ಮಾಡಿ. ಇದಕ್ಕೆ ರೋಸ್ ವಾಟರ್ ಕೂಡ ಸೇರಿಸಿ. ನಂತರ ಈ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ದಾಳಿಂಬೆ ಸಿಪ್ಪೆಯ ಫೇಸ್ ಮಾಸ್ಕ್ ಅನ್ನು ಹಚ್ಚುವ ಮೊದಲು ಚೆನ್ನಾಗಿ ಮುಖವನ್ನು ತೊಳೆಯಿರಿ. ಬಳಿಕ ಹಚ್ಚಿ ಅದನ್ನು 10 ನಿಮಿಷಗಳ ಕಾಲ ಅದನ್ನು ಒಣಗಿಸಿ. ಇದರ ನಂತರ, ಅದನ್ನು ತಣ್ಣೀರಿನಿಂದ ತೊಳೆದು ಸ್ವಚ್ಛಗೊಳಿಸಿ.
ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಈ ಮನೆಮದ್ದನ್ನು ವಾರಕ್ಕೆ 2 ಬಾರಿ ಬಳಸಬಹುದು.