ಆಲಿವ್ ಎಣ್ಣೆಯು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ವಿಟಮಿನ್ ಇ ನಂತಹ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಆವಕಾಡೊ ಎಣ್ಣೆಯು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳ ಅತ್ಯುನ್ನತ ಮಟ್ಟವನ್ನು ಹೊಂದಿದೆ. ಈ ಎಣ್ಣೆಯನ್ನು ಬಳಕೆ ಮಾಡುವುದರಿಂದ ಹೃದಯದ ಆರೋಗ್ಯ ಕಾಪಾಡಬಹುದು.
ಕಡಲೆಕಾಯಿ ಎಣ್ಣೆಯ ಸಾಮಾನ್ಯ ವಿಧವಾಗಿದೆ. ಇದು ಬಜೆಟ್ ಸ್ನೇಹಿ ಮತ್ತು ಪರಿಮಳವನ್ನು ಹೊಂದಿದೆ, ಇದು ಅನೇಕ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ.
ಸೌಂದರ್ಯ ಮತ್ತು ಕೂದಲ ರಕ್ಷಣೆಗೆ ಚಿಯಾ ಬೀಜಗಳ ಎಣ್ಣೆಯನ್ನು ಅಡುಗೆಯಲ್ಲಿ ಬೆರೆಸಿ ಸೇವಿಸಬಹುದು. ಇದರಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ ಎಂದು ಕರೆಯಲ್ಪಡುವ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ.
ಕ್ಯಾನೋಲಾ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸೇರಿದಂತೆ ಪ್ರಮುಖ ಆರೋಗ್ಯ ಸಂಸ್ಥೆಗಳು ಕ್ಯಾನೋಲ ತೈಲದ ಬಳಕೆಯನ್ನು ಶಿಫಾರಸು ಮಾಡುತ್ತವೆ.