Health Tipes: ಸೀತಾಫಲದ ಹಣ್ಣಿನಲ್ಲರುವ ಉಪಯೋಗಗಳು

Published by: Zee Kannada News Desk | Jan 29, 2023

ರಕ್ತದೊತ್ತಡ ನಿಯಂತ್ರಣ

ದೇಹದಲ್ಲಿನ ರಕ್ತದೊತ್ತಡದ ಏರಿಳಿತಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಪೊಟ್ಯಾಸಿಯಮ್ ಮತ್ತು ಸೋಡಿಯಂನ ಸಮತೋಲಿತ ಅನುಪಾತವನ್ನು ಹೊಂದಿರುವ ಕೆಲವೇ ಹಣ್ಣುಗಳಲ್ಲಿಸೀತಾಫಲ ಕೂಡ ಒಂದು.

Published by: Zee Kannada News Desk | Jan 29, 2023

ಆಯಾಸ ದೂರಮಾಡುತ್ತದೆ

ಜೀವನಶೈಲಿ ಮತ್ತು ರೋಗಗಳು ಸೇರಿದಂತೆ ಹಲವಾರು ಅಂಶಗಳಿಂದ ಆಯಾಸವು ಉಂಟಾಗುತ್ತದೆ. ಸೀತಾಫಲದ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಮತ್ತು ಖನಿಜಾಂಶಗಳು ನಿರಂತರವಾಗಿ ಶಕ್ತಿಯನ್ನು ಒದಗಿಸುತ್ತದೆ.

Published by: Zee Kannada News Desk | Jan 29, 2023

ಕ್ಯಾನ್ಸರ್‌ ನಿಯಂತ್ರಣ

ಸೀತಾಫಲದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ದೇಹಕ್ಕೆ ಎರಗುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳಿಂದ ರಕ್ಷಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

Published by: Zee Kannada News Desk | Jan 29, 2023

ಮಲಬದ್ದತೆ ಸಮಸ್ಯೆ ನಿವಾರಣೆ

ಸೀತಾಫಲ ಹಣ್ಣುಗಳಲ್ಲಿ ತಾಮ್ರದ ಅಂಶ ಮತ್ತು ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರ ತುಂಬಾ ದೊಡ್ಡದು.

Published by: Zee Kannada News Desk | Jan 29, 2023

ಮಧುಮೇಹ ಸಮಸ್ಯೆಗೆ ಪರಿಹಾರ

ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರ ಮಾಡಬಹುದು.

Published by: Zee Kannada News Desk | Jan 29, 2023

VIEW ALL

Read Next Story