ವಿಟಮಿನ್‌ಗಳು, ಕ್ಯಾಲ್ಸಿಯಂ, ಫೋಲೆಟ್ ನಂತಹ ಆರೋಗ್ಯಕ್ಕೆ ಉತ್ತಮವಾದ ಹಲವು ಪೋಷಕಾಂಶಗಳನ್ನು ಹೊಂದಿರುವ ಸೋರೆಕಾಯಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಸೋರೆಕಾಯಿ ಸಿಪ್ಪೆ ಒರೆದು ಬ್ಲೆಂಡರ್‌ನಲ್ಲಿ ರುಬ್ಬಿ ಇದರಲ್ಲಿ ಒಂದೇ ಒಂದು ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ನಿಯಮಿತವಾಗಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಇದು ಮೂತ್ರದಲ್ಲಿ ಆಮ್ಲದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮೂತ್ರನಾಳದ ಸೋಂಕು ಎಂದರೆ ಯುಟಿಐ ಸಮಸ್ಯೆಗೆ ಸುಲಭ ಪರಿಹಾರ ನೀಡುತ್ತದೆ.
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಸುಲಭವಾಗಿ ಹೈ ಬಿಪಿಯನ್ನು ನಿಯಂತ್ರಿಸಬಹುದು.
ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಒತ್ತಡ, ಆತಂಕ ನಿವಾರಣೆಯಾಗಿ ಮನಸ್ಸು ಶಾಂತಚಿತ್ತವಾಗಿರುತ್ತದೆ.
ಯಕೃತ್ತಿನ ಉರಿಯೂತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೋರೆಕಾಯಿ ಜ್ಯೂಸ್ ಆರೋಗ್ಯಕರ ಪಾನೀಯ ಎಂದು ಪರಿಗಣಿಸಲಾಗಿದೆ.
ಸೋರೆಕಾಯಿ ರಸ ಕುಡಿಯುವುದರಿಂದ ಇದು ಗ್ಯಾಸ್ಟ್ರಿಕ್ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಸೋರೆಕಾಯಿ ಜ್ಯೂಸ್ ದೇಹದಲ್ಲಿ ಚಯಾಪಚಯವನ್ನು ವೇಗಗೊಳಿಸುತ್ತದೆ. ಜೊತೆಗೆ ತ್ವರಿತವಾಗಿ ಕೊಬ್ಬನ್ನು ಸುಡುವುದರಿಂದ ತೂಕ ಇಳಿಕೆಗೆ ಅತ್ಯುತ್ತಮ ಪಾನೀಯ ಎಂದು ಪರಿಗಣಿಸಲಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.