ನೋಡಲು ತೆಳ್ಳಗೆ ಅಂದದ ಆಕಾರದ ಮೈ ಕಟ್ಟು ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ನಾನಾ ಕಾರಣಗಳಿಂದ ಇದು ಸಾಧ್ಯವಾಗದೇ ಹೋಗಬಹುದು. ಕೆಲವು ತರಕಾರಿಗಳ ಸೇವನೆಯಿಂದ ತೆಳ್ಳನೆ ಮೈಕಟ್ಟು ಹೊಂದುವುದು ಸಾಧ್ಯವಾಗುತ್ತದೆ.
ಬ್ರೋಕೊಲಿ ಸೇವನೆಯಿಂದ ಚಯಾಪಚಯ ಸುಧಾರಿಸುತ್ತದೆ. ಇದು ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.
ಬೀನ್ಸ್ ನಲ್ಲಿರುವ ಪೋಷಕ ತತ್ವ ದೇಹ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ
ಕುಂಬಳಕಾಯಿಯಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ.ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಅಣಬೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಇರುತ್ತದೆ. ಇದು ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕರಗಿಸುತ್ತದೆ.
ಪಾಲಕ್ ನಲ್ಲಿ ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ಕಂಡು ಬರುತ್ತದೆ. ಇದನ್ನು ಸೇವಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದು.
ಹೂ ಕೋಸಿನಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಹೊಟ್ಟೆಯನ್ನು ತುಂಬಿಡುವಂತೆ ಮಾಡುತ್ತದೆ.
ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ತರಕಾರಿಗಳನ್ನು ಸೇವಿಸಿದರೆ ಹೆಚ್ಚಿನ ಅನುಕೂಲವಾಗುವುದು
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.