ದೇಹದಲ್ಲಿ ಹೀಗಾಗುತ್ತಿದ್ದರೆ Vitamin D ಕೊರತೆಯಾಗಿದೆ ಎಂದರ್ಥ ! ತಕ್ಷಣ ಈ ಆಹಾರ ಸೇವಿಸಿ

Ranjitha R K
Jun 06,2025

ವಿಟಮಿನ್ ಡಿ ಕೊರತೆ

ದೇಹದಲ್ಲಿ ವಿಟಮಿನ್ ಡಿ ಕೊರತೆಯಾದರೆ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತಿರುವುದು ಸಾಮಾನ್ಯ ಸಮಸ್ಯೆಯಾಗಿದೆ.

ಕೂದಲು ಉದುರುವುದು :

ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ.

ತೂಕ ಹೆಚ್ಚಾಗುವುದು :

ಹಠಾತ್ ತೂಕ ಹೆಚ್ಚಾಗುವುದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರುತ್ತದೆ. ವಿಟಮಿನ್ ಡಿ ನಮ್ಮ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ಅನ್ನು ನೀಡುತ್ತದೆ.ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸುಸ್ತು :

7 ರಿಂದ 8 ಗಂಟೆಗಳ ನಿದ್ದೆ ಮಾಡಿದ ನಂತರವೂ, ಸುಸ್ತು, ಆಲಸ್ಯವಾಗುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವೂ ಆಗಿರಬಹುದು.

ಮನಸ್ಥಿತಿಯ ಮೇಲೆ ಪರಿಣಾಮ

ಮಾತಿಗೆ ಮುನ್ನ ಸಿಡುಕುತನ, ಖಿನ್ನತೆಗೆ ಒಳಗಾಗುವುದು, ಸಣ್ಣ ಸಣ್ಣ ವಿಚಾರಗಳಿಗೆ ಅಳುವುದು ಸಹ ವಿಟಮಿನ್ ಡಿ ಕೊರತೆಯ ಸಂಕೇತವಾಗಿರುತ್ತದೆ.

ಕೀಲು ಮತ್ತು ಸ್ನಾಯು ನೋವು :

ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ, ಅದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ಕೊರತೆಯಿಂದಾಗಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ. ಇದರಿಂದಾಗಿ ಮೂಳೆಗಳು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ವಿಟಮಿನ್ ಡಿ ಪೂರೈಸುವ ಆಹಾರಗಳು :

ಅಣಬೆ, ಮೊಟ್ಟೆ, ಹಾಲು, ಸೋಯಾ ಹಾಲು, ಕಿತ್ತಳೆ ರಸ, , ಕೊಬ್ಬಿನ ಅಂಶಗಳಿರುವ ಮೀನು, ಇತ್ಯಾದಿಗಳನ್ನು ಸೇವಿಸುವುದರಿನದ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.

ವಿಟಮಿನ್ ಡಿ ಕೊರತೆ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .

VIEW ALL

Read Next Story