ಆರೋಗ್ಯದ ಗಣಿ ಕಲ್ಲಂಗಡಿ ಬೀಜ
ಕಲ್ಲಂಗಡಿಯಲ್ಲಿ ಪ್ರೋಟೀನ್, ವಿಟಮಿನ್ ಬಿ, ಮೆಗ್ನೀಸಿಯಮ್, ಫೋಲೇಟ್, ರಂಜಕ, ಕಬ್ಬಿಣ, ಪೊಟ್ಯಾಸಿಯಮ್, ತಾಮ್ರ, ಸತು ಕಂಡು ಬರುತ್ತದೆ. ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಆದರಿದ ಬೀಜವೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದಿದೆಯೇ?
ಕಲ್ಲಂಗಡಿ ಬೀಜಗಳು ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನೋಡುವುದಾದರೆ...
ಪೌಷ್ಟಿಕಾಂಶಯುಕ್ತ ಕಲ್ಲಂಗಡಿ ಬೀಜಗಳು ತೂಕ ಇಳಿಕೆಗೆ ತುಂಬಾ ಪ್ರಯೋಜಂಕಾರಿ ಆಗಿದೆ. ನಿತ್ಯ ಕೇವಲ ನಾಲ್ಕು ಗ್ರಾಂ ಕಲ್ಲಂಗಡಿ ಬೀಜ ಸೇವನೆಯಿಂದ ಸ್ಥೂಲಕಾಯತೆ ಕಡಿಮೆಯಾಗುತ್ತದೆ.
ಕಲ್ಲಂಗಡಿ ಬೀಜ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಇದರಿಂದಾಗಿ ಆಯಾಸ ನಿವಾರಣೆಯಾಗುತ್ತದೆ.
ಕಲ್ಲಂಗಡಿ ಬೀಜಗಳಲ್ಲಿ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಪ್ರೋಟೀನ್‌ಗಳನ್ನು ಹೇರಳವಾಗಿ ಕಂಡು ಬರುತ್ತವೆ. ಇದರಿಂದಾಗಿ ಬಿಪಿ ನಿಯಂತ್ರಿಸಬಹುದು.
ಕಲ್ಲಂಗಡಿ ಬೀಜಗಳ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಕಲ್ಲಂಗಡಿ ಬೀಜಗಳ ಸೇವನೆಯು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಅತ್ಯುತ್ತಮ ಪರಿಹಾರವಾಗಿದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.