ಏಕಮುಖಿ ರುದ್ರಾಕ್ಷಿ ಅಂದರೆ ಒಂದು ಮುಖವನ್ನು ಹೊಂದಿರುವ ರುದ್ರಾಕ್ಷಿ.
ಇದು ಶಿವನ ಸಂಕೇತವೆಂದು ಪರಿಗಣಿಸಲಾಗಿದ್ದು, ಸೂರ್ಯ ದೇವನ ಆಡಳಿತಕ್ಕೆ ಒಳಪಟ್ಟಿದೆ.
ಈ ರುದ್ರಾಕ್ಷಿ ಧರಿಸಿದ್ರೆ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ & ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿ.
ಏಕ ಮುಖವನ್ನು ಹೊಂದಿರುವ ರುದ್ರಾಕ್ಷಿಯನ್ನ ಶಿವನ ಕಣ್ಣಿನಿಂದ ಬೀಳುವ ಹನಿ ಎಂದು ಪರಿಗಣಿಸಲಾಗುತ್ತದೆ.
ಈ ರುದ್ರಾಕ್ಷಿ ಧರಿಸುವುದರಿಂದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತವೆ.
ಏಕಮುಖಿ ರುದ್ರಾಕ್ಷಿಯನ್ನು ಪೂಜಿಸಿ, ಶುದ್ಧ ನೀರಿನಿಂದ ತೊಳೆದು, ಹಾಲಿನಲ್ಲಿ ಅದ್ದಿ ನಂತರ ಧರಿಸಬೇಕು.
ಮಾಂಸಹಾರ ಸೇವಿಸುವಾಗ ಮತ್ತು ಮದ್ಯಪಾನ ಮಾಡುವಾಗ ಈ ರುದ್ರಾಕ್ಷಿಯನ್ನು ಅಪ್ಪಿತಪ್ಪಿಯೂ ಧರಿಸಬಾರದು.
ಜಾತಕದಲ್ಲಿ ಸೂರ್ಯನ ದೋಷವಿದ್ದರೆ, ಏಕಮುಖಿ ರುದ್ರಾಕ್ಷಿ ಧರಿಸುವುದು ಪರಿಹಾರ ನೀಡುತ್ತದೆ.