ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯಕ್ಕೂ ಮತ್ತು ನಿಮ್ಮ ಹಾರ್ಟ್‌ಗೂ ತುಂಬಾ ಡೇಂಜರ್!
ಹೀಗಾಗಿ ಆಗಾಗ ಕೆಟ್ಟ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಕೇವಲ ಹೃದಯ ಮಾತ್ರವಲ್ಲ ನಮ್ಮ ಕೈಕಾಲುಗಳಲ್ಲಿ ಕೂಡ ಅನೇಕ ತೊಂದರೆಗಳು ಎದುರಾಗುತ್ತವೆ.
ಯಾವಾಗ ನಮ್ಮ ಕೊಲೆಸ್ಟ್ರಾಲ್ ಪ್ರಮಾಣ ಮಿತಿಮೀರುತ್ತದೋ ಆ ಸಂದರ್ಭದಲ್ಲಿ ನಮ್ಮ ದೇಹದ ವಿವಿಧ ಭಾಗಗಳಲ್ಲಿ ವಿವಿಧ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಪ್ರಮುಖವಾಗಿ ಕೈ ಕಾಲುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುವುದರ ಸಹಿತ ಮುಟ್ಟಿದಾಗ ಯಾವುದೇ ತರಹದ ಸೂಕ್ಷ್ಮತೆ ಕಂಡುಬರುವುದಿಲ್ಲ.
ಕೈ ಕಾಲುಗಳ ಭಾಗದಲ್ಲಿ ಸರಿಯಾಗಿ ರಕ್ತ ಸಂಚಾರ ಆಗದಿರುವುದರಿಂದ ಈ ರೀತಿಯ ತೊಂದರೆ ಕಾಣಿಸುತ್ತದೆ. ಇದು ಮುಂದಿನ ದಿನಗಳಲ್ಲಿ ಹೃದಯ ಸಮಸ್ಯೆಗೆ ಕಾರಣವಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್ ಪ್ರಮಾಣದಿಂದ ಕೈ ಕಾಲುಗಳು ಮತ್ತು ಬೆರಳುಗಳು ತಣ್ಣಗಾಗುತ್ತವೆ. ರಕ್ತ ಸಂಚಾರ ಸರಿಯಾಗಿ ನಡೆಯದೆ ಈ ರೀತಿ ಆಗುವುದು ಸಹಜ.