ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು?

Bhavishya Shetty
Jun 27,2024

ತೂಕ ಇಳಿಕೆ

ಬಿಸಿ ಅನ್ನಕ್ಕೆ ತುಪ್ಪ ಬೆರೆಸಿ ಸೇವಿಸುವದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಈ ದೇಸಿ ಮತ್ತು ಸರಳ ಆಹಾರ ಪದ್ಧತಿ ತೂಕ ಇಳಿಕೆಗೆ ಸಹಾಯಕ.

ಪ್ರೋಟೀನ್

ಸಸ್ಯಾಹಾರಿಗಳಿಗೆ, ದೇಸಿ ತುಪ್ಪ ಮತ್ತು ಅನ್ನ ಎರಡೂ ಪ್ರೋಟೀನ್’ಗಳ ಉತ್ತಮ ಮೂಲಗಳಾಗಿವೆ.

ಜೀರ್ಣಕ್ರಿಯೆ

ಅನ್ನ ಮತ್ತು ದೇಸಿ ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯು ಪರಿಪೂರ್ಣವಾಗಿ ಉಳಿಯುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.

ಉತ್ತಮ ಬ್ಯಾಕ್ಟೀರಿಯಾ

ತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿರುವ ಕೊಳೆಯನ್ನೂ ಸುಲಭವಾಗಿ ಹೊರಹಾಕಬಹುದು. ಇನ್ನು ಅನ್ನ ಪ್ರಿಬಯಾಟಿಕ್ ಆಗಿ ಕೆಲಸ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಲಿನೋಲೆನಿಕ್ ಆಮ್ಲ

ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಚಯಾಪಚಯವನ್ನು ಆರೋಗ್ಯಕರವಾಗಿರಿಸುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಲಿನೋಲೆನಿಕ್ ಆಮ್ಲವನ್ನು ಸಹ ಹೊಂದಿದ್ದು ಹೃದಯರಕ್ತನಾಳದ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಪ್ರೊಟೀನ್ ಸಮೃದ್ಧ

ಎಲ್ಲಕ್ಕಿಂತ ಮುಖ್ಯವಾಗಿ ಅನ್ನ ಮತ್ತು ತುಪ್ಪ ಎರಡರಲ್ಲೂ ಪ್ರೊಟೀನ್ ಸಮೃದ್ಧವಾಗಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಅಥವಾ ಮಧ್ಯಾಹ್ನದ ಊಟದಲ್ಲಿ ತುಪ್ಪ ಮತ್ತು ಅನ್ನವನ್ನು ಮಾತ್ರ ಸೇವಿಸಬೇಕು.

ಸೂಚನೆ:

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story