ಮಧುಮೇಹಿಗಳು ಚಳಿಗಾಲದಲ್ಲಿ ಪ್ರತಿದಿನ ಸೇವಿಸಬೇಕಾದ ಆಹಾರಗಳು

Bhavishya Shetty
Nov 08,2023

ಆಹಾರಗಳ ಪಟ್ಟಿ

ಮಧುಮೇಹವು ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಕಾಯಿಲೆ ವಾಸಿಯಾಗದು ಅನ್ನೋದು ಎಲ್ಲರಿಗೂ ಗೊತ್ತು. ಆದರೆ ನಿಮ್ಮ ಆಹಾರ ಪದ್ಧತಿಯತ್ತ ಗಮನ ಹರಿಸಿದರೆ ಇದನ್ನು ನಿಯಂತ್ರಿಸಬಹುದು. ಮಧುಮೇಹಿಗಳು ಚಳಿಗಾಲದಲ್ಲಿ ತಿನ್ನಬೇಕಾದ ಆಹಾರಗಳ ಪಟ್ಟಿ ಇಲ್ಲಿದೆ.

ರಾಗಿ:

ರಾಗಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಅಂಶ ಇದೆ. ಇದನ್ನು ಮಧುಮೇಹಿಗಳು ಪ್ರತಿದಿನ ಸೇವಿಸಿದರೆ ನಿಮಗೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ.

ದಾಲ್ಚಿನ್ನಿ:

ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ. ಇದನ್ನು ಚಹಾದಲ್ಲಿ ಬೆರೆಸಿ ಕುಡಿಯಬಹುದು.

ನೆಲ್ಲಿಕಾಯಿ:

ಮಧುಮೇಹ ರೋಗಿಗಳಿಗೆ ಆಮ್ಲಾ ತುಂಬಾ ಒಳ್ಳೆಯದು. ಇದರಲ್ಲಿ ಕ್ರೋಮಿಯಂ ಸಮೃದ್ಧವಾಗಿದೆ. ಜೊಎಯೆ ವಿಟಮಿನ್ ಸಿ ಕೂಡ ಇದೆ. ಆದ್ದರಿಂದ ಇದು ಮಧುಮೇಹ ಇರುವವರಿಗೆ ಪ್ರಯೋಜನವನ್ನು ನೀಡುತ್ತದೆ.

ಕ್ಯಾರೆಟ್:

ಕ್ಯಾರೆಟ್ ಆರೋಗ್ಯಕ್ಕೆ ಪ್ರಯೋಜನಕಾರಿ ಆಹಾರವಾಗಿದೆ. ಮಧುಮೇಹಿಗಳು ಪ್ರತಿದಿನ ಕ್ಯಾರೆಟ್ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಸಿಗುತ್ತದೆ.

ಸೂಚನೆ

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story