ಬೇವಿನೆಲೆ ಮಾತ್ರವಲ್ಲ ಅದರ ಕಾಂಡವೂ ಆರೋಗ್ಯಕ್ಕೆ ಲಾಭದಾಯಕ
ಬೇವು ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿಯೇ ಇದನ್ನು ಔಷಧೀಯ ಸಸ್ಯ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಬೇವಿನ ಎಲೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು. ಆದರೆ, ಬೇವಿನ ಕಡ್ಡಿಯ ಈ ಪ್ರಯೋಜನಗಳ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ!
ನಿಮಗೆ ಆಗಾಗ್ಗೆ ಏನಾದರೂ ತಿನ್ನುವ ಅಭ್ಯಾಸವಿದ್ದು, ಇದನ್ನು ತೊಡೆದುಹಾಕಲು ಬಯಸಿದರೆ ಬೇವಿನ ಕಡ್ಡಿಯನ್ನು ಜಗಿಯಿರಿ. ಇದು ಪದೇ ಪದೇ ತಿನ್ನುವ ಅಭ್ಯಾಸವನ್ನು ತಪ್ಪಿಸುತ್ತದೆ.
ಹಲ್ಲುಗಳಲ್ಲಿ ಸೋಂಕಿನ ಸಮಸ್ಯೆ ಇರುವವರಿಗೆ ಬೇವಿನ ಕಡ್ಡಿ ತಿನ್ನುವುದರಿಂದ ಪರಿಹಾರ ದೊರೆಯುತ್ತದೆ.
ಬೇವಿನ ಕಡ್ಡಿಯನ್ನು ಜಗಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಆರೋಗ್ಯಕರವಾಗಿಡಬಹುದು.
ಡಬಲ್ ಚಿನ್ ಸಮಸ್ಯೆ ಇರುವವರು ಆಗಾಗ್ಗೆ ಬೇವಿನ ಕಡ್ಡಿಯನ್ನು ಜಗಿಯುವುದು ಇದರಿಂದ ಪರಿಹಾರ ಪಡೆಯಬಹುದು.
ಬೇವಿನ ಕಡ್ಡಿ ಜಗಿದು ಅದರ ರಸ ದೇಹವನ್ನು ಸೇರಿದರೆ ರಕ್ತ ಶುದ್ಧಿಯಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.