ರಕ್ತದೊತ್ತಡ ಹೆಚ್ಚಾಗಲು ಪ್ರಮುಖ ಕಾರಣವೇನು? ಅಧಿಕ ರಕ್ತದೊತ್ತಡ ನಿಯಂತ್ರಿಸಲು ಈ ಟಿಪ್ಸ್‌ ಫಾಲೋ ಮಾಡಿ

How to control High BP: ರಕ್ತದೊತ್ತಡ ಹೆಚ್ಚಾಗಲು ಕೆಲವು ಸಾಮಾನ್ಯ ಕಾರಣಗಳ ಬಗ್ಗೆ ನಿಮಗೆ ತಿಳಿದಿದೆಯೇ? ಅಧಿಕ ರಕ್ತದೊತ್ತಡದ ಕಾರಣಗಳು ಮತ್ತು ಈ ಸಮಸ್ಯೆಯನ್ನು ಹೇಗೆ ನಿವಾರಿಸುವುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Apr 12, 2025, 09:48 PM IST
  • ತೂಕ ಹೆಚ್ಚಾಗುವುದು ಅಥವಾ ಬೊಜ್ಜುತನ ರಕ್ತದೊತ್ತಡ ಹೆಚ್ಚಾಗಲು ಪ್ರಮುಖ ಕಾರಣ
  • ಜಂಕ್‌ಫುಡ್ ಅಥವಾ ಕರಿದ ಆಹಾರ ಸೇವಿಸಿದರೆ ನಿಮ್ಮ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ
  • ಆರೋಗ್ಯಕರ-ಸಮತೋಲಿತ ಆಹಾರ ಯೋಜನೆ ಅನುಸರಿಸಿದರೆ ರಕ್ತದೊತ್ತಡ ನಿಯಂತ್ರಿಸಬಹುದು
ರಕ್ತದೊತ್ತಡ ಹೆಚ್ಚಾಗಲು ಪ್ರಮುಖ ಕಾರಣವೇನು? ಅಧಿಕ ರಕ್ತದೊತ್ತಡ ನಿಯಂತ್ರಿಸಲು ಈ ಟಿಪ್ಸ್‌ ಫಾಲೋ ಮಾಡಿ

High blood pressure: ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಗಾಗ ರಕ್ತದೊತ್ತಡದಲ್ಲಿನ ಹೆಚ್ಚಳವು ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನಿಮ್ಮ ಹೃದಯದ ಆರೋಗ್ಯವನ್ನ ಬಲಪಡಿಸಲು ಬಯಸಿದರೆ, ರಕ್ತದೊತ್ತಡ ಹೆಚ್ಚಾಗಲು ಕೆಲವು ಸಾಮಾನ್ಯ ಕಾರಣಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.

Add Zee News as a Preferred Source

ಅತಿಯಾದ ಒತ್ತಡ

ಆರೋಗ್ಯ ತಜ್ಞರ ಪ್ರಕಾರ, ಅತಿಯಾದ ಒತ್ತಡವನ್ನು ತೆಗೆದುಕೊಳ್ಳುವ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸಬಹುದು. ಇದಲ್ಲದೆ ಮದ್ಯಪಾನ ಅಥವಾ ಧೂಮಪಾನದ ಅಭ್ಯಾಸವು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಆಹ್ವಾನಿಸಬಹುದು.

ಇದನ್ನೂ ಓದಿ: ಈ ‌4 ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ನುಗ್ಗೆಕಾಯಿ ಸೇವಿಸಬಾರದು; ಜೀವಕ್ಕೆ ತುಂಬಾ ಡೇಂಜರ್!!

ತೂಕ ಹೆಚ್ಚಾಗುವಿಕೆ

ನಿರಂತರವಾಗಿ ತೂಕ ಹೆಚ್ಚಾಗುವುದು ಅಥವಾ ಬೊಜ್ಜುತನ ಕೂಡ ರಕ್ತದೊತ್ತಡ ಹೆಚ್ಚಾಗಲು ಪ್ರಮುಖ ಕಾರಣವಾಗಬಹುದು. ಇದಲ್ಲದೆ ನೀವು ಹೆಚ್ಚಾಗಿ ಜಂಕ್‌ಫುಡ್ ಅಥವಾ ಕರಿದ ಆಹಾರವನ್ನು ಸೇವಿಸುತ್ತಿದ್ದರೆ, ನಿಮ್ಮ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ನೀವು ಅಧಿಕ ರಕ್ತದೊತ್ತಡದ ಸಮಸ್ಯೆ ತೊಡೆದುಹಾಕಲು ಬಯಸಿದರೆ, ನೀವು ಆರೋಗ್ಯಕರ-ಸಮತೋಲಿತ ಆಹಾರ ಯೋಜನೆ ಅನುಸರಿಸಲು ಪ್ರಯತ್ನಿಸಬೇಕು. ನೀವು ಹಗಲಿನಲ್ಲಿ ವ್ಯಾಯಾಮ ಮಾಡುವುದಿಲ್ಲವೇ? ಇದು ರಕ್ತದೊತ್ತಡ ಹೆಚ್ಚಾಗಲು ಒಂದು ಕಾರಣವೂ ಆಗಿರಬಹುದು.

ರಕ್ತದೊತ್ತಡ ನಿಯಂತ್ರಿಸುವ ಮಾರ್ಗಗಳು

ನೀವು ರಕ್ತದೊತ್ತಡವನ್ನು ನಿಯಂತ್ರಿಸಲು ಬಯಸಿದರೆ, ಮೊದಲು ನಿಮ್ಮ ಒತ್ತಡವನ್ನು ನಿರ್ವಹಿಸಲು ಕಲಿಯಬೇಕು. ನಿಮ್ಮ ಹೃದಯದ ಆರೋಗ್ಯವನ್ನು ಬಲಪಡಿಸಲು, ನೀವು ಮದ್ಯಪಾನ ಅಥವಾ ಧೂಮಪಾನದ ಚಟಕ್ಕೆ ವಿದಾಯ ಹೇಳಬೇಕು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತೊಡೆದುಹಾಕಲು, ನೀವು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಸಹ ನಿಯಂತ್ರಿಸಬೇಕಾಗುತ್ತದೆ. ರಕ್ತದೊತ್ತಡ ಹೆಚ್ಚಾಗಲು ಕಾರಣಗಳ ಬಗ್ಗೆ ಗಮನ ನೀಡಿದರೆ, ನಿಮ್ಮ ಹೃದಯದ ಆರೋಗ್ಯವು ಸುಧಾರಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: 90% ನೀರಿನಂಶವಿರುವ ಈ ಹಣ್ಣನ್ನು ಸೇವಿಸಿದರೆ ಶುಗರ್, ತೂಕ ನಷ್ಟದಿಂದ ಹಿಡಿದು ಮಲಬದ್ದತೆ ವರೆಗೆ ಸರ್ವ ರೋಗಗಳಿಗೂ ಸಿಗುವುದು ಪರಿಹಾರ !

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News