)
Ideal Weight: ಒಬ್ಬ ವ್ಯಕ್ತಿ ಆರೋಗ್ಯವಂತರಾಗಿದ್ದಾರೆ ಎಂಬುದನ್ನು ತಿಳಿಯಲು ಅವರ ಗುಡ್ ಲುಕಿಂಗ್ ಮಾತ್ರವಲ್ಲ, ಅವರ ದೇಹದ ಎತ್ತರ ಮತ್ತು ತೂಕವೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿ ಎಷ್ಟು ಎತ್ತರ ಇದ್ದಾರೆ ಎಂಬುದು ಅವರ ತೂಕಕ್ಕೆ ನೇರ ಸಂಬಂಧವನ್ನು ಹೊಂದಿದೆ. ಎತ್ತರಕ್ಕೆ ತಕ್ಕಂತೆ ಎಷ್ಟು ತೂಕ ಹೊಂದಿರಬೇಕು ಎಂಬುದನ್ನು ತಿಳಿಯಲು ತಜ್ಞರು ಬಾಡಿ ಮಾಸ್ ಇಂಡೆಕ್ಸ್ (BMI) ಎಂಬ ಸೂತ್ರವನ್ನು ಬಳಸುತ್ತದೆ.
ತೂಕ ಹೆಚ್ಚಾದರೆ ಏನಾಗುತ್ತದೆ?
ವ್ಯಕ್ತಿ ಆತನ ಎತ್ತರಕ್ಕಿಂತ ಹೆಚ್ಚಿನ ತೂಕವನ್ನು ಹೊಂದಿದ್ದರೆ ಅಂತಹವರು ಸ್ಥೂಲಕಾಯ, ರಕ್ತದೊತ್ತಡ, ಹೃದಯ ಕಾಯಿಲೆ, ಮಧುಮೇಹ ಮತ್ತು ಕೀಲು ನೋವಿನ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಾರೆ.
ತೂಕ ಕಡಿಮೆ ಇದ್ದರೆ ಏನು ಸಮಸ್ಯೆ?
ಎತ್ತರಕ್ಕಿಂತ ತೂಕ ಹೆಚ್ಚಿದ್ದರೆ ಮಾತ್ರ ಸಮಸ್ಯೆಯಲ್ಲ, ಎತ್ತರಕ್ಕೆ ತಕ್ಕಂತೆ ತೂಕ ಇಲ್ಲದಿದ್ದರೂ ಕೂಡ ದೇಹದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ದೌರ್ಬಲ್ಯ, ಅಪೌಷ್ಟಿಕತೆ ಹೆಚ್ಚು ಕಾಡುತ್ತದೆ.
BMI ಎಂದರೇನು? ಇದನ್ನು ಹೇಗೆ ಲೆಕ್ಕಚಾರ ಮಾಡಲಾಗುತ್ತದೆ?
ವೈದ್ಯಕೀಯ ಭಾಷೆಯಲ್ಲಿ ಬಿಎಂಐ ಎಂದರೆ ಬಾಡಿ ಮಾಸ್ ಇಂಡೆಕ್ಸ್. ಇದು ವ್ಯಕ್ತಿಯ ಎತ್ತರವು ಆತನ ತೂಕಕ್ಕೆ ಸಮತೋಲಿತವಾಗಿದೆಯೇ ಎಂಬುದನ್ನು ಸೂಚಿಸುತ್ತದೆ.
ಬಿಎಂಐ ಲೆಕ್ಕಾ ಹಾಕುವ ಸೂತ್ರ: BMI = ತೂಕ (ಕಿಲೋಗ್ರಾಂಗಳು) / ಎತ್ತರ (ಮೀಟರ್ಗಳು)².
ಉದಾಹರಣೆಗೆ, ಯಾರಾದರೂ 70 ಕೆಜಿ ತೂಕ ಮತ್ತು 1.83 ಮೀಟರ್ (6 ಅಡಿ) ಎತ್ತರವಿದ್ದರೆ, ಅವರ BMI ಹೀಗಿರುತ್ತದೆ:
70 / (1.83 × 1.83) = 20.90.
18.5 ಮತ್ತು 24.9 ರ ನಡುವಿನ BMI ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. 18.5 ಕ್ಕಿಂತ ಕಡಿಮೆ ಇರುವ ಬಿಎಂಐ ಎಂದರೆ ನೀವು ಕಡಿಮೆ ತೂಕ ಹೊಂದಿದ್ದೀರಿ ಮತ್ತು 25 ಅಥವಾ ಅದಕ್ಕಿಂತ ಹೆಚ್ಚಿನ ತೂಕವಿದ್ದರೆ ನೀವು ಅಧಿಕ ತೂಕ ಹೊಂದಿದ್ದೀರಿ ಎಂದು ಸೂಚಿಸುತ್ತದೆ.
ಆದಾಗ್ಯೂ, ಬಿಎಂಐ ಕೇವಲ ಪ್ರಾಥಮಿಕ ಮಾರ್ಗದರ್ಶಿಯಾಗಿದ್ದು ಇದು ಹೊಟ್ಟೆಯ ಕೊಬ್ಬನ್ನು ಪ್ರತಿಬಿಂಬಿಸುವುದಿಲ್ಲ. ಆದರೆ, ಹೆಚ್ಚಿನ ಬಿಎಂಐ ಹೆಚ್ಚಾಗಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಅಪಾಯದ ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಲಾಗುತ್ತದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ, ಎತ್ತರಕ್ಕೆ ತಕ್ಕಂತೆ ಎಷ್ಟು ತೂಕವಿದ್ದೀರಿ ಎಂಬುದನ್ನು ತಿಳಿಯಲು ಕೇವಲ ಬಿಎಂಐ ಅನ್ನು ಅವಲಂಬಿಸುವ ಬದಲು, ಹೊಟ್ಟೆಯ ಕೊಬ್ಬು ಮತ್ತು ಸೊಂಟದ ಸುತ್ತಳತೆ ಕೂಡ ಮುಖ್ಯವಾಗಿದೆ. ಪುರುಷರಿಗೆ ಸೊಂಟದ ಸುತ್ತಳತೆ 90 ಸೆಂಟಿಮೀಟರ್ಗಳಿಗಿಂತ ಹೆಚ್ಚು ಮತ್ತು ಮಹಿಳೆಯರಿಗೆ 80 ಸೆಂಟಿಮೀಟರ್ಗಳಿಗಿಂತ ಹೆಚ್ಚು ಇದ್ದರೆ ಅದು ಬೊಜ್ಜು ಮತ್ತು ಹೃದ್ರೋಗದ ಅಪಾಯವನ್ನು ಸೂಚಿಸುತ್ತದೆ.
ಎಷ್ಟು ಎತ್ತರವಿರುವವರ ತೂಕ ಎಷ್ಟಿರಬೇಕು? ಈ ಚಾರ್ಟ್ ಪರಿಶೀಲಿಸಿ
| ಎತ್ತರ | ಮಹಿಳೆಯರು | ಪುರುಷರು |
| 152 ಸೆಂ.ಮೀ (5 ಅಡಿ) | 40–50 ಕೆಜಿ | 43–53 ಕೆಜಿ |
| 160 ಸೆಂ.ಮೀ (5.3 ಅಡಿ) | 47–57 ಕೆಜಿ | 50–61 ಕೆಜಿ |
| 165 ಸೆಂ.ಮೀ (5.5 ಅಡಿ) | 51–62 ಕೆಜಿ | 55–68 ಕೆಜಿ |
| 170 ಸೆಂ.ಮೀ (5.7 ಅಡಿ) | 55–67 ಕೆಜಿ | 60–73 ಕೆಜಿ |
| 175 ಸೆಂ.ಮೀ (5.9 ಅಡಿ) | 59–72 ಕೆಜಿ | 65–79 ಕೆಜಿ |
| 180 ಸೆಂ.ಮೀ (6 ಅಡಿ) | 63–77 ಕೆಜಿ | 70–85 ಕೆಜಿ |
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.