)
heart attack first aid: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಒಂದೊಂದು ನಿಮಿಷಕ್ಕೂ ಹೆಚ್ಚಾಗುತ್ತಿವೆ. ಪ್ರತಿದಿನ ಕೆಲವು ಸೆಲೆಬ್ರಿಟಿಗಳು, ಪರಿಚಯಸ್ಥರಿಗೆ ಅಥವಾ ಸೋಷಿಯಲ್ ಮೀಡಿಯಾದ ವೈರಲ್ ವಿಡಿಯೋಗಳಲ್ಲಿ ಹಠಾತ್ ಹೃದಯಾಘಾತವಾದ ಬಗ್ಗೆ ನೋಡುತ್ತಲೇ ಇರುತ್ತೇವೆ. ಹೃದಯಾಘಾತದ ಸಂದರ್ಭದಲ್ಲಿ ತಕ್ಷಣದ ಪ್ರಥಮ ಚಿಕಿತ್ಸೆಯಿಂದ ಜೀವವನ್ನೇ ಉಳಿಸಬಹುದಾಗಿದೆ.
ಹೃದಯಾಘಾತ ಆದ ತಕ್ಷಣ ಏನು ಮಾಡುತ್ತೇವೆ ಎಂಬುದರ ಮೇಲೆ ರೋಗಿಯು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾರ್ಟ್ ಅಟ್ಯಾಕ್ ಆದ ಸಮಯದಲ್ಲಿ ಜೀವ ಉಳಿಸಲು ಪ್ರಥಮ ಚಿಕಿತ್ಸೆ ತುಂಬಾ ಸಹಾಯಕವಾಗಬಹುದು. ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆಯಾಗಿ ಈ ಎಲೆಯ ರಸವನ್ನು ಕುಡಿಸಬಹುದಾಗಿದೆ.
ಹೃದಯದ ಆರೋಗ್ಯ ಪರಿಶೀಲಿಸುವುದು ಹೇಗೆ?
ಆರೋಗ್ಯವಂತ ವ್ಯಕ್ತಿ ಇದ್ದಕ್ಕಿದ್ದಂತೆ ಬಿದ್ದು ಸಾಯುವುದನ್ನು ಕಂಡರೆ ಎಂಥವರೂ ಹೆದರುತ್ತಾರೆ. ಭಾರತದಲ್ಲಿ ಯುವಜನರಲ್ಲಿ ಹೃದಯ ಸ್ತಂಭನದ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ನಿಮ್ಮ ಹೃದಯ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಒಂದು ಸರಳ ಪರೀಕ್ಷೆ ಇದೆ. 45 ನಿಮಿಷಗಳ ಕಾಲ ನಡೆಯಬೇಕು. ನೀವು ನಿಲ್ಲದೆ ನಡೆಯಲು ಸಾಧ್ಯವಾದರೆ, ನಿಮ್ಮ ಹೃದಯ ಚೆನ್ನಾಗಿದೆ ಮತ್ತು ಆರೋಗ್ಯವಾಗಿದೆ ಎಂದರ್ಥ.
ಹೃದಯಾಘಾತದ ಸಮಯದಲ್ಲಿ ಏನಾಗುತ್ತದೆ?
ಹೃದಯಾಘಾತವಾದಾಗ ಎದೆ ನೋವು 15 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುತ್ತದೆ. ಕೆಲವರಿಗೆ ಸೌಮ್ಯವಾದ ನೋವು ಇದ್ದರೆ ಇನ್ನು ಕೆಲವರಿಗೆ ಎದೆ ಹಿಂಡುವಂತೆ ತಡೆಯಲಾಗದಷ್ಟು ತೀವ್ರವಾದ ನೋವು ಉಂಟಾಗುತ್ತದೆ. ಹೃದಯದ ಮೇಲೆ ಒತ್ತಡ ಅಥವಾ ದೊಡ್ಡ ಕಲ್ಲು ಹೇರಿದಂತೆ ಭಾರದ ಭಾವನೆ ಅನುಭವಿಸುತ್ತಾರೆ. ಕೆಲವು ಜನರು ಅಂತಹ ಯಾವುದೇ ಲಕ್ಷಣಗಳನ್ನು ಅನುಭವಿಸುವುದಿಲ್ಲ. ಸೈಲೆಂಟ್ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ಇನ್ನೂ ಕೆಲವು ಮಹಿಳೆಯರಲ್ಲಿ, ವಾಂತಿ ಅಥವಾ ಬೆನ್ನು ನೋವು ಮುಂತಾದ ಲಕ್ಷಣಗಳು ಹಾರ್ಟ್ ಅಟ್ಯಾಕ್ಗೂ ಮುನ್ನ ಕಾಣಬಹುದು.
ಹೃದಯಾಘಾತದ ಲಕ್ಷಣಗಳು ಯಾವವು?
ಹೃದಯಾಘಾತವಾದಾಗ ಸಾಮಾನ್ಯವಾಗಿ ಎದೆ ನೋವು, ಎದೆಯಲ್ಲಿ ಒತ್ತಡ, ಎದೆ ಬಿಗಿತ ಅಥವಾ ಎದೆಯ ಮಧ್ಯದಲ್ಲಿ ಹಿಸುಕುವ ಅಥವಾ ತೀಕ್ಷ್ಣವಾದ ನೋವನ್ನು ಅನುಭವಿಸುತ್ತಾರೆ. ನೋವು ಮತ್ತು ಅಸ್ವಸ್ಥತೆ ಭುಜಗಳು, ತೋಳುಗಳು, ಬೆನ್ನು, ಕುತ್ತಿಗೆ, ದವಡೆ, ಹಲ್ಲುಗಳು ಮತ್ತು ಕೆಲವೊಮ್ಮೆ ಹೊಟ್ಟೆಯ ಮೇಲ್ಭಾಗದಲ್ಲಿ ಈ ನೋವು ಹರಡಬಹುದು. ವಾಂತಿ, ಅಜೀರ್ಣ, ಎದೆಯುರಿ ಅಥವಾ ಹೊಟ್ಟೆ ನೋವು, ಬೆವರಲು ಪ್ರಾರಂಭಿಸುತ್ತೀರಿ ಮತ್ತು ತಲೆತಿರುಗುವಿಕೆ ಅಥವಾ ಮೂರ್ಛೆ ಹೋದಂತೆ ಭಾಸವಾಗುತ್ತದೆ.
ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆ
1. ತುರ್ತು ಸಂಖ್ಯೆಗೆ ಕರೆ ಮಾಡಿ
ನೀವು ಅಥವಾ ಬೇರೆ ಯಾರಾದರೂ ನಿಮ್ಮ ಸುತ್ತಲೂ ಹೃದಯಾಘಾತದ ಲಕ್ಷಣಗಳನ್ನು ಅನುಭವಿಸಿದರೆ, ಅದನ್ನು ನೋಡುತ್ತ ಆತಂಕಗೊಳ್ಳಬೇಡಿ. ಧೈರ್ಯದಿಂದ ತುರ್ತು ಸಂಖ್ಯೆಗೆ ಕರೆ ಮಾಡಿ ವೈದ್ಯಕೀಯ ಸಹಾಯಕ್ಕಾಗಿ ಆಂಬ್ಯುಲೆನ್ಸ್ ತರಲು ಹೇಳಿ. ಅಂತಹ ಸೌಲಭ್ಯವಿಲ್ಲದಿದ್ದರೆ, ಸ್ನೇಹಿತರು, ಪರಿಚಯಸ್ಥ ಅಥವಾ ನೆರೆಹೊರೆಯವರ ತಕ್ಷಣಕ್ಕೆ ಯಾರು ಸಿಗುತ್ತಾರೋ ಅವರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ತೆರಳಿ.
2. ಆಸ್ಪಿರಿನ್ ನುಂಗಿ
ತುರ್ತು ಸೇವೆಗಳು ಬರುವುದು ತಡವಾಗಿದ್ದರೆ ಈ ಸಮಯದಲ್ಲಿ ವೈದ್ಯರು ತಿಳಿಸಿದ್ದರೆ ಆಸ್ಪಿರಿನ್ ತೆಗೆದುಕೊಳ್ಳಿ. ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಹೃದಯಾಘಾತದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಬಹುದು. ಆಸ್ಪಿರಿನ್ಗೆ ಅಲರ್ಜಿ ಹೊಂದಿದ್ದರೆ ಅದನ್ನು ತೆಗೆದುಕೊಳ್ಳಬಾರದು.
3. ನೈಟ್ರೋಗ್ಲಿಸರಿನ್ ತೆಗೆದುಕೊಳ್ಳಿ
ನಿಮಗೆ ಹೃದಯಾಘಾತವಾಗಿದೆ ಎಂದು ನೀವು ಭಾವಿಸಿದರೆ ವೈದ್ಯರು ನೈಟ್ರೋಗ್ಲಿಸರಿನ್ ಅನ್ನು ಶಿಫಾರಸು ಮಾಡಿದ್ದರೆ, ತಕ್ಷಣ ನೈಟ್ರೋಗ್ಲಿಸರಿನ್ ತೆಗೆದುಕೊಳ್ಳಿ. ಇದರಿಂದ ಪ್ರಾಣ ಉಳಿಯಬಹುದು.
4. ಪ್ರಜ್ಞಾಹೀನನಾಗಿದ್ದರೆ CPR ನೀಡಿ
ಹಾರ್ಟ್ ಅಟ್ಯಾಕ್ ಆದ ವ್ಯಕ್ತಿ ಪ್ರಜ್ಞಾಹೀನನಾಗಿದ್ದರೆ, ಉಸಿರಾಡಲು ಸಾಧ್ಯವಾಗದಿದ್ದರೆ ಅಥವಾ ನಾಡಿಮಿಡಿತವಿಲ್ಲದಿದ್ದರೆ, ಅವನಿಗೆ CPR ನೀಡಬೇಕು.
ಈ ಎಲೆಯ ರಸ ಕುಡಿಸಿ :
ಕೆಲವು ಎಲೆಗಳನ್ನು ಬಳಸುವುದರಿಂದ ಜೀವಕ್ಕೆ ಆಗುವ ಅಪಾಯಗಳನ್ನು ಕಡಿಮೆ ಮಾಡಬಹುದು. ಬೇವಿನ ಎಲೆಗಳಲ್ಲಿ ಹೃದಯಾಘಾತದಿಂದ ಜೀವ ಉಳಿಸುವಂಥ ಶಕ್ತಿ ಇದೆ. ಬೇವಿನ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಈ ಎಲೆಯನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿಡುತ್ತದೆ. ಹಾರ್ಟ್ ಅಟ್ಯಾಕ್ ಲಕ್ಷಣ ಕಂಡುಬಂದರೆ ಕೂಡಲೆ ಒಂದೆರಡು ಬೇವಿನ ಎಲೆ ರಸವನ್ನು ನಾಲಿಗೆ ಮೇಲೆ ಹಿಂಡಿ.
ಬೇವಿನ ಎಲೆ ರಸ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಮಧುಮೇಹಿಗಳಲ್ಲಿ ಶುಗರ್ ಹೈ ಆಗಿ ಹೃದಯಾಘಾತ ಉಂಟಾಗಿದ್ದರೆ ಶುಗರ್ ಲೆವಲ್ ಕಂಟ್ರೋಲ್ ಆಗುತ್ತದೆ. ಬೇವಿನ ಎಲೆ ಜೀವ ಉಳಿಸುವ ಶಕ್ತಿ ಹೊಂದಿದೆ. ಆದರೆ ಇದು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ. ಹಾರ್ಟ್ ಅಟ್ಯಾಕ್ ಆದ ವ್ಯಕ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ವೈದ್ಯರ ಬಳಿ ಕರೆದೊಯ್ಯಬೇಕು.
ಹೃದಯವನ್ನು ಉಳಿಸಲು 5 ವಿಷಯಗಳು :
ಹೃದಯವನ್ನು ಆರೋಗ್ಯವಾಗಿಡಲು ವೈದ್ಯರು ಐದು ವಿಷಯಗಳನ್ನು ಸಹ ಹೇಳಿದರು. ಮೊದಲನೆಯದಾಗಿ, ವಾರದಲ್ಲಿ ಮೂರು ದಿನ 45 ನಿಮಿಷಗಳ ಕಾಲ ನಡೆಯಿರಿ. ಎರಡನೆಯದಾಗಿ, ತೂಕ ನಿರ್ವಹಣೆ. ತೂಕ ಹೆಚ್ಚಾಗಲು ಬಿಡಬೇಡಿ. ಸಂಸ್ಕರಿಸಿದ ಆಹಾರ, ಕೇಕ್, ಪೇಸ್ಟ್ರಿ ತಿನ್ನಬೇಡಿ. ಹೆಚ್ಚಿನ ಒತ್ತಡವಿದ್ದರೆ, ಧ್ಯಾನ ಮಾಡಿ ಮತ್ತು ನೀವು ಏನು ಮಾಡುತ್ತಿದ್ದರೂ ಅದರಿಂದ ವಿರಾಮ ತೆಗೆದುಕೊಳ್ಳಿ.
ಹೃದಯದ ಆರೋಗ್ಯಕ್ಕಾಗಿ 3 ಸೂಪರ್ಫುಡ್
ಹೃದಯದ ಆರೋಗ್ಯಕ್ಕಾಗಿ ವೈದ್ಯರು 3 ಸೂಪರ್ಫುಡ್ಗಳನ್ನು ಹೇಳಿದರು. ಪ್ರತಿದಿನ 10 ಬಾದಾಮಿ, 4 ವಾಲ್ನಟ್ ತಿನ್ನಿರಿ. ಇವುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಹಲವು ಪೋಷಕಾಂಶಗಳಿವೆ. ಬ್ರೊಕೊಲಿ ತಿನ್ನಿರಿ. ಇದು ಹೃದಯದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ