)
Warning Signs of a Heart Attack: ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಕ್ರಮದಿಂದ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಹೃದಯ ವೈಫಲ್ಯದ ಆರಂಭಿಕ ಲಕ್ಷಣಗಳಾಗಿರಬಹುದಾದ ಕೆಲವು ಲಕ್ಷಣಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಎದೆ ನೋವು ಹೃದಯದ ಆರೋಗ್ಯದ ಕೊರತೆಯ ಸಂಕೇತವಾಗಿರಬಹುದು. ಮಲಗಿರುವಾಗ ಉಸಿರಾಟದ ತೊಂದರೆ ಕಂಡುಬಂದರೆ ನೀವು ಜಾಗರೂಕರಾಗಿರಬೇಕು. ಹೆಚ್ಚು ಕೆಲಸ ಮಾಡದೆ ಬೇಗನೆ ಸುಸ್ತಾಗುವುದು ಸಹ ಹೃದಯ ವೈಫಲ್ಯದ ಆರಂಭಿಕ ಲಕ್ಷಣವಾಗಿರಬಹುದು.
ಕೆಮ್ಮುವಾಗ ಉಬ್ಬಸ ಬರುವುದು, ಇಂತಹ ಲಕ್ಷಣ ಹೃದಯದ ಆರೋಗ್ಯದ ಕೊರತೆಯನ್ನು ಸೂಚಿಸುತ್ತದೆ. ಹೃದಯ ವೈಫಲ್ಯದ ಆರಂಭಿಕ ಲಕ್ಷಣಗಳಲ್ಲಿ ಕಾಲುಗಳಲ್ಲಿ ಊತವೂ ಸೇರಿದೆ. ಇಂತಹ ಲಕ್ಷಣಗಳನ್ನು ನೀವು ಚಿಕ್ಕದೆಂದು ಭಾವಿಸಿ ನಿರ್ಲಕ್ಷಿಸಬಾರದು.
ನಿಮ್ಮ ಹೃದಯ ವೇಗವಾಗಿ ಬಡಿಯುತ್ತಿದೆಯೇ? ಹೌದು ಎಂದಾದರೆ, ಯಾವುದೇ ರೀತಿ ವಿಳಂಬ ಮಾಡದೆ ನೀವು ತಕ್ಷಣವೇ ಜಾಗರೂಕರಾಗಿರಬೇಕು. ಹೊಟ್ಟೆಯಲ್ಲಿ ಊತದ ಸಮಸ್ಯೆಯು ಹೃದಯ ವೈಫಲ್ಯದ ಆರಂಭಿಕ ಲಕ್ಷಣವೂ ಆಗಿರಬಹುದು. ಹೀಗಾಗಿ ಆಗಾಗ ನಿಮ್ಮ ಆರೋಗ್ಯವನ್ನ ತಪಾಸಣೆ ಮಾಡಿಕೊಳ್ಳಿಸಬೇಕು.
ನೀವು ಇಂತಹ ಲಕ್ಷಣಗಳನ್ನು ಒಟ್ಟಿಗೆ ನೋಡುತ್ತಿದ್ದರೆ, ಕೂಡಲೇ ಹತ್ತಿರದ ವೈದ್ಯರ ಬಳಿ ತೆರಳಿ ನಿಮ್ಮ ಆರೋಗ್ಯವನ್ನ ಪರೀಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ ನೀವು ಗಂಭೀರ ಆರೋಗ್ಯ ಪರಿಣಾಮವನ್ನ ಎದುರಿಸಬೇಕಾಗಬಹುದು. ಹೃದಯಾಘಾತವನ್ನ ಯಾರೂ ಸಹ ನಿರ್ಲಕ್ಷ್ಯ ಮಾಡಬಾರದು. ಇಲ್ಲದಿದ್ದರೆ ಇದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)