Benefits Of Eating Soaked Dates: ಆರೋಗ್ಯವು ಯಾವುದೇ ಮನುಷ್ಯನ ಪಾಲಿಗೆ ಒಂದು ದೊಡ್ಡ ಸಂಪತ್ತಾಗಿದೆ.ಪ್ರತಿಯೊಬ್ಬರೂ ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಲು ಬಯಸುತ್ತಾರೆ, ಆದರೆ ಪ್ರಸ್ತುತ ಯುಗದ ಜೀವನಶೈಲಿಯು ಈ ಕೆಲಸವನ್ನು ತುಂಬಾ ಕಷ್ಟಕರವಾಗಿಸಿದೆ. ಇಂದಿನ ಬಹುತೇಕ ರೋಗಗಳಿಗೆ ಜೀರ್ಣಾಂಗ ವ್ಯವಸ್ಥೆಯ ದೌರ್ಬಲ್ಯವೇ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರಬೇಕು ಮತ್ತು ನಿಮ್ಮ ದೇಹದ ಚಯಾಪಚಯ ಕ್ರಿಎಯೆಯ ದರ ಸರಿಯಾಗಿರುವುದು ತುಂಬಾ ಮುಖ್ಯವಾಗಿದೆ. ನೆನೆಸಿದ ಖರ್ಜೂರವು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ನಿಮಗೆ ಸಹಾಯ ಮಾಡುತ್ತದೆ. ಪ್ರೋಟೀನ್, ಫೈಬರ್, ಜೀವಸತ್ವಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸೇರಿದಂತೆ ಅಗತ್ಯ ಖನಿಜಗಳು ಖರ್ಜೂರದಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರ ಗುಣಧರ್ಮ ಬಿಸಿಯಾಗಿರುತ್ತದೆ. ಖರ್ಜೂರದ ಗುಣಲಕ್ಷಣಗಳನ್ನು ನೋಡಿದರೆ, ನೀವು ಇದನ್ನು ಆರೋಗ್ಯ ಮತ್ತು ರುಚಿಯ ನಿಧಿ ಎಂದು ಕರೆದರೆ ತಪ್ಪಾಗಲಾರದು.


COMMERCIAL BREAK
SCROLL TO CONTINUE READING

ಖರ್ಜೂರವನ್ನು ಸೇವಿಸುವುದು ಹೇಗೆ?
ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ ಮತ್ತು ಮಲಬದ್ಧತೆ, ಅಜೀರ್ಣ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುವ ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಮ್ಮ ದೈನಂದಿನ ಆಹಾರದಲ್ಲಿ ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ನೀವು ಶಾಮೀಲುಗೊಳಿಸಿದರೆ, ಖರ್ಜೂರವು ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.  ಇದರಲ್ಲಿರುವ ಕ್ಯಾಲ್ಸಿಯಂ ಕೀಲು ನೋವಿನ ವಿರುದ್ಧ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ನೈಸರ್ಗಿಕ ಸಕ್ಕರೆ ಇದರಲ್ಲಿದೆ, ಇದರಿಂದಾಗಿ ಇದರಿಂದ ಮಧುಮೇಹದ ಅಪಾಯವಿಲ್ಲ.


ಇದನ್ನೂ ಓದಿ-Beauty Tips: ಯಂಗ್ ಹಾಗೂ ಬ್ಯೂಟಿಫುಲ್ ಕಾಣಿಸಿಕೊಳ್ಳಬೇಕೇ? ನಿತ್ಯ ಈ ಒಂದು ಕೆಲಸ ಮಾಡಿ ಸಾಕು


ಚರ್ಮಕ್ಕೆ ಪ್ರಯೋಜನಕಾರಿ
ಹೊಸ ವರ್ಷದಲ್ಲಿ ಯಾವುದೇ ವ್ಯಕ್ತಿ ನೆನೆಸಿದ ಖರ್ಜೂರಗಳನ್ನು ತನ್ನ ಆಹಾರದ ಭಾಗವನ್ನಾಗಿಸಿದರೆ, ಮುಖದ ಸುಕ್ಕುಗಳು, ಕಪ್ಪು ವರ್ತುಲಗಳು ಮತ್ತು ಕಲೆಗಳು ಮಾಯವಾಗುತ್ತವೆ. ಇದರ ಬಳಕೆಯಿಂದ ಮುಖದಲ್ಲಿ ಒಂದು ವಿಭಿನ್ನ ಹೊಳಪು ಕಂಡು ಬರುತ್ತದೆ. ಆ್ಯಂಟಿ ಏಜಿಂಗ್‌ಗೆ ಖರ್ಜೂರವು ಪರಿಪೂರ್ಣ ಆಹಾರ ಎಂದು ತ್ವಚೆಯ ಆರೈಕೆ ತಜ್ಞರು ಹೇಳುತ್ತಾರೆ.


ಇದನ್ನೂ ಓದಿ-Health Tips: ಹೊಕ್ಕುಳಕ್ಕೆ ಆಲಿವ್ ಎಣ್ಣೆ ಅನ್ವಯಿಸುವುದರಿಂದ ಆಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.