)
Weight loss drink: ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಜನರು ತಮ್ಮ ಚಾಚಿಕೊಂಡಿರುವ ಹೊಟ್ಟೆಯ ಬಗ್ಗೆ ಚಿಂತಿತರಾಗಿದ್ದಾರೆ. ಹೊಟ್ಟೆಯ ಕೊಬನ್ನ ಕಡಿಮೆ ಮಾಡಲು ಅನೇಕರು ಜಿಮ್ಗೆ ಹೋಗುತ್ತಾರೆ, ಯೋಗ ಮಾಡುತ್ತಾರೆ ಮತ್ತು ವಿವಿಧ ಆಹಾರಕ್ರಮಗಳನ್ನ ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಇದ್ಯಾವುದು ಪ್ರಯೋಜನಕ್ಕೆ ಬಂದಿರುವುದಿಲ್ಲ. ಫಲಿತಾಂಶದ ಕೊರತೆಯಿಂದ ಜನರು ನಿರಾಶೆಗೊಂಡಿದ್ದು, ತಮ್ಮ ಹೊಟ್ಟೆಯ ಕೊಬ್ಬನ್ನ ಹೇಗೆ ಕಡಿಮೆ ಮಾಡುವುದು ಎಂದು ಟೆನ್ಶನ್ ಆಗಿರುತ್ತಾರೆ. ಇದಕ್ಕೆ ಇನ್ಮುಂದೆ ನೀವು ಚಿಂತಿಸುವ ಅಗತ್ಯವಿಲ್ಲ. ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುವ ಸುಲಭ ವಿಧಾನದ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ...
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ವಿಶೇಷ ಪಾನೀಯವನ್ನ ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪಾನೀಯವು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ, ಚಯಾಪಚಯವನ್ನ ಹೆಚ್ಚಿಸುತ್ತದೆ ಮತ್ತು ಬೆಣ್ಣೆಯಂತೆ ದೇಹದ ಕೊಬ್ಬನ್ನ ಕರಗಿಸುತ್ತದೆ. ನಾವು ಯಾವ ಪಾನೀಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಹಾಗಾದರೆ ಆ ಪಾನೀಯ ಯಾವುದು ಎಂದು ತಿಳಿಯೋಣ ಬನ್ನಿ...
ಯಾವುದು ಆ ಪಾನೀಯ?
ನಾವು ಇಲ್ಲಿ ಮಾತನಾಡುತ್ತಿರುವ ಸೋಂಪು ನೀರಿನ ಬಗ್ಗೆ. ಫೆನ್ನೆಲ್ ವಾಟರ್ ಹೊಟ್ಟೆಯ ಕೊಬ್ಬನ್ನ ಕಡಿಮೆ ಮಾಡಲು ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಸೋಂಪ ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ಖನಿಜಗಳನ್ನ ಹೊಂದಿದ್ದು, ಅದು ಬೆಣ್ಣೆಯಂತೆ ದೇಹದ ಕೊಬ್ಬನ್ನ ಕರಗಿಸಲು ಕೆಲಸ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನ ಹೆಚ್ಚಿಸುತ್ತದೆ, ಕ್ಯಾಲೊರಿಗಳನ್ನ ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಈ ಪಾನೀಯವನ್ನ ತಯಾರಿಸುವುದು ಹೇಗೆ?
ಸೋಂಪು ನೀರನ್ನ ತಯಾರಿಸಲು, ಒಂದು ಚಮಚ ಸೋಂಪು ಬೀಜಗಳನ್ನ ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಅದನ್ನ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನೀವು ಇದನ್ನ ಬೆಚ್ಚಗಿನ ನೀರಿನಲ್ಲಿಯೂ ಕುಡಿಯಬಹುದು. ನೀವು ಈ ಪಾನೀಯವನ್ನ ನಿಯಮಿತವಾಗಿ ಸೇವಿಸಿದರೆ, ಹೊಟ್ಟೆಯಲ್ಲಿ ಸಂಗ್ರಹವಾದ ಕೊಬ್ಬು ಸುಲಭವಾಗಿ ಕಡಿಮೆಯಾಗುತ್ತದೆ. ನೀವು ಹಗುರವಾಗಿರುತ್ತೀರಿ ಮತ್ತು ದಿನವಿಡೀ ಚೈತನ್ಯಶೀಲರಾಗಿರುತ್ತೀರಿ. ಸೋಂಪು ನೀರನ್ನ ಕುಡಿಯುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸೋಂಪು ನೀರು ದೇಹದಿಂದ ವಿಷವನ್ನ ತೆಗೆದುಹಾಕಲು ಕೆಲಸ ಮಾಡುತ್ತದೆ. ಇದು ಲಿವರ್ ಮತ್ತು ಕಿಡ್ನಿಗಳ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)