ರಾತ್ರಿ ಎಣ್ಣೆ ಜಾಸ್ತಿಯಾಗಿದ್ದರೆ ಮಾರನೇ ದಿನ ಖಾಲಿ ಹೊಟ್ಟೆಗೆ ಈ ಜ್ಯೂಸ್ ಕುಡಿಯಿರಿ ! ದೇಹ ಮತ್ತೆ ನಿರ್ವಿಷವಾಗಿ ಲಿವರ್ ಹಾಳಾಗುವುದನ್ನು ತಡೆಯುತ್ತದೆ !

ಮರುದಿನ ಬೆಳಗ್ಗೆ ಹ್ಯಾಂಗೊವರ್, ತಲೆನೋವು, ವಾಕರಿಕೆ ಮತ್ತು ಆಯಾಸದಂತಹ ಸಮಸ್ಯೆಗಳು ಕಾಡುತ್ತವೆ. ಈ ಪರಿಸ್ಥಿತಿಯಲ್ಲಿ, ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ಯಕೃತ್ತು ಶುದ್ಧವಾಗುತ್ತದೆ.

Written by - Ranjitha R K | Last Updated : Apr 24, 2025, 02:53 PM IST
  • ಯುವಕರಿಂದ ಹಿಡಿದು ವಯಸ್ಕರವರೆಗೆ, ಅನೇಕ ಜನರು ಮೋಜು ಮಸ್ತಿಯ ಹೆಸರಿನಲ್ಲಿ ಮದ್ಯ ಸೇವಿಸುತ್ತಾರೆ.
  • ಪಾರ್ಟಿ ಎಂದರೆ ಅಲ್ಲಿ ಮದ್ಯಪಾನ ಇರಲೇಬೇಕು ಎನ್ನುವ ಸಂಪ್ರದಾಯ ಬೆಳೆಯುತ್ತಿದೆ.
  • ಮದ್ಯಪಾನ ಎನ್ನುವುದು ಫ್ಯಾಶನ್ ಆಗಿ ಬಿಟ್ಟಿದೆ.
ರಾತ್ರಿ ಎಣ್ಣೆ ಜಾಸ್ತಿಯಾಗಿದ್ದರೆ ಮಾರನೇ ದಿನ ಖಾಲಿ ಹೊಟ್ಟೆಗೆ ಈ ಜ್ಯೂಸ್ ಕುಡಿಯಿರಿ ! ದೇಹ ಮತ್ತೆ ನಿರ್ವಿಷವಾಗಿ ಲಿವರ್ ಹಾಳಾಗುವುದನ್ನು ತಡೆಯುತ್ತದೆ !

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ಪಾರ್ಟಿಗಳು ಮತ್ತು ಸೋಶಿಯಲ್ ಇವೆಂಟ್ ಗಳಲ್ಲಿ ಮದ್ಯಪಾನ ಮಾಡುವುದು ಸಾಮಾನ್ಯವಾಗಿದೆ. ಯುವಕರಿಂದ ಹಿಡಿದು ವಯಸ್ಕರವರೆಗೆ, ಅನೇಕ ಜನರು ಮೋಜು ಮಸ್ತಿಯ ಹೆಸರಿನಲ್ಲಿ ಮದ್ಯ ಸೇವಿಸುತ್ತಾರೆ.  ಇನ್ನು ಪಾರ್ಟಿ ಎಂದರೆ ಅಲ್ಲಿ ಮದ್ಯಪಾನ ಇರಲೇಬೇಕು ಎನ್ನುವ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ. ಮದ್ಯಪಾನ ಎನ್ನುವುದು ಫ್ಯಾಶನ್ ಆಗಿ ಬಿಟ್ಟಿದೆ. ಇದರಿಂದಾಗಿ, ಪಾರ್ಟಿಯ ಮೋಜಿನಲ್ಲಿ ಹಲವು ಬಾರಿ ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವಿಸಿ ಬಿಡುತ್ತಾರೆ ಜನ. ಆದರೆ ಮರುದಿನ ಬೆಳಗ್ಗೆ ಹ್ಯಾಂಗೊವರ್, ತಲೆನೋವು, ವಾಕರಿಕೆ ಮತ್ತು ಆಯಾಸದಂತಹ ಸಮಸ್ಯೆಗಳು ಕಾಡುತ್ತವೆ. ಈ ಪರಿಸ್ಥಿತಿಯಲ್ಲಿ, ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯವಾಗುತ್ತದೆ. ಹೀಗೆ ಮಾಡುವುದರಿಂದ ಯಕೃತ್ತು ಶುದ್ಧವಾಗುತ್ತದೆ.  

Add Zee News as a Preferred Source

ಯಕೃತ್ತು ಶುದ್ದಗೊಳಿಸಲು ಈ ಜ್ಯೂಸ್ : 
ನಿಂಬೆ ಜ್ಯೂಸ್ : ಹ್ಯಾಂಗೊವರ್ ಆಗುತ್ತಿದ್ದರೆ ನಿಂಬೆ ನೀರು ಸಹಾಯ ಮಾಡುತ್ತದೆ. ದೇಹದಲ್ಲಿ ಸಂಗ್ರಹವಾದ ವಿಷವನ್ನು ಹೊರಹಾಕಲು ನಿಂಬೆ ನೀರು ಸುಲಭವಾದ ಮಾರ್ಗವಾಗಿದೆ. ಇದರಲ್ಲಿರುವ ವಿಟಮಿನ್ ಸಿ ಯಕೃತ್ತನ್ನು ಶುದ್ಧೀಕರಿಸಲು ಮತ್ತು ನಿರ್ಜಲೀಕರಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆರಸ ಮತ್ತು ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಿರಿ. 

ಇದನ್ನೂ ಓದಿ :  ಔಷಧಿ or ಪಥ್ಯದಿಂದಲ್ಲ..! ತಿಂದು-ಕುಡಿದೇ ಡಯಾಬಿಟಿಸ್ ನಿಯಂತ್ರಿಸಬಹುದು... ಹೇಗ್ ಗೊತ್ತಾ...

ಎಳ ನೀರು : ಮದ್ಯ ಸೇವಿಸಿದ ನಂತರ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಕೊರತೆ ಉಂಟಾಗುತ್ತದೆ. ಏಕೆಂದರೆ ಮದ್ಯವು ಮೂತ್ರವರ್ಧಕವಾಗಿದ್ದು, ಇದು ಆಗಾಗ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಇದರಿಂದ ಮತ್ತು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಖನಿಜಗಳನ್ನು ದೇಹದಿಂದ ತೆಗೆದುಹಾಕಲಾಗುತ್ತದೆ. ಇದು ನಿರ್ಜಲೀಕರಣ, ಆಯಾಸ, ತಲೆನೋವು ಮತ್ತು ದೌರ್ಬಲ್ಯದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ,  ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ಎಳನೀರು ದೇಹವನ್ನು ಹೈಡ್ರೇಟ್ ಮಾಡಿ ಆಯಾಸವನ್ನು ನಿವಾರಿಸುತ್ತದೆ.

ಶುಂಠಿ-ನಿಂಬೆ ಚಹಾ : ಮದ್ಯ ಸೇವಿಸಿದ ನಂತರ ವಾಕರಿಕೆ ಅಥವಾ ವಾಂತಿ ಬಂದರೆ, ಶುಂಠಿ ಚಹಾ ತುಂಬಾ ಪ್ರಯೋಜನಕಾರಿ. ಶುಂಠಿ ರಸಕ್ಕೆ ನಿಂಬೆ ಬೆರೆಸಿ  ಕುಡಿಯುವುದರಿಂದ ಹೊಟ್ಟೆ ತಂಪಾಗುತ್ತದೆ, ವಾಕರಿಕೆ ನಿವಾರಣೆಯಾಗುತ್ತದೆ, ವಾಂತಿ ನಿಲ್ಲುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನೂ ಓದಿ :  ಕೈ ಮತ್ತು ಕುತ್ತಿಗೆಯ ಟ್ಯಾನ್ ತೆಗೆಯಲು ನಿಂಬೆ ರಸಕ್ಕೆ ಈ ವಸ್ತುವನ್ನು ಬೆರೆಸಿ ಹಚ್ಚಿ! ಹತ್ತೇ ಸೆಕೆಂಡುಗಳಲ್ಲಿ ತ್ವಚೆ ಮತ್ತೆ ಹಾಲಿನಂಥ ಬಿಳಿಪು ಪಡೆಯುತ್ತದೆ !

ಅಲೋವೆರಾ ಜ್ಯೂಸ್ : ಅಲೋವೆರಾ ರಸವು ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡಿ, ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದು ಹೊಟ್ಟೆಯ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 

ಹಣ್ಣುಗಳು ಮತ್ತು ತರಕಾರಿಗಳ ಡಿಟಾಕ್ಸ್ ಜ್ಯೂಸ್ : ಸೌತೆಕಾಯಿ, ಪಾಲಕ್, ನಿಂಬೆ ಮತ್ತು ಸೇಬಿನಿಂದ ತಯಾರಿಸಿದ ಡಿಟಾಕ್ಸ್ ಜ್ಯೂಸ್ ಮದ್ಯದ ನಂತರ ದೇಹವನ್ನು ಶುದ್ಧೀಕರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News