)
High uric acid symptoms
: ಇಂದಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಜನರಲ್ಲಿ ಯೂರಿಕ್ ಆಮ್ಲದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಯೂರಿಕ್ ಆಮ್ಲ ಹೆಚ್ಚಾದಾಗ ಕೀಲುಗಳಲ್ಲಿ ತೀವ್ರವಾದ ನೋವು ಉಂಟಾಗುತ್ತದೆ ಮತ್ತು ಎದ್ದು ಕುಳಿತುಕೊಳ್ಳಲು ಕಷ್ಟವಾಗುತ್ತದೆ. ವಾಸ್ತವವಾಗಿ ನಮ್ಮ ದೇಹವು ಯೂರಿಕ್ ಆಮ್ಲವನ್ನ ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದಾಗ, ಅದು ಕೀಲುಗಳಲ್ಲಿ ಹರಳುಗಳ ರೂಪದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಊತ ಮತ್ತು ಕಾಲುಗಳಲ್ಲಿ ನೋವಿನ ಸಮಸ್ಯೆಯನ್ನ ಹೆಚ್ಚಿಸುತ್ತದೆ. ಅನೇಕ ಜನರು ಇದನ್ನ ಸಾಮಾನ್ಯ ನೋವು ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗಿದೆಯೇ ಎಂದು ನೀವು ಸುಲಭವಾಗಿ ಕಂಡುಹಿಡಿಯಬಹುದು ಹೇಗೆ ಎಂದು ತಿಳಿಯಿರಿ...
ಬೆಳಗ್ಗೆ ಎದ್ದಾಗ ಹಿಮ್ಮಡಿ ಮತ್ತು ಹೆಬ್ಬೆರಳಿನಲ್ಲಿ ನೋವು
ಬೆಳಗ್ಗೆ ಎದ್ದ ನಂತರ ನಿಮ್ಮ ಹಿಮ್ಮಡಿ ಮತ್ತು ಹೆಬ್ಬೆರಳಿನಲ್ಲಿ ತೀವ್ರ ನೋವು ಇದ್ದರೆ, ನೀವು ಜಾಗರೂಕರಾಗಿರಬೇಕು. ಇದು ಹಲವಾರು ದಿನಗಳವರೆಗೂ ಇದ್ದರೆ ನಿಮ್ಮ ಯೂರಿಕ್ ಆಮ್ಲ ಹೆಚ್ಚಾಗಿದೆ ಎಂದರ್ಥ. ಈ ಸ್ಥಿತಿಯನ್ನ ಗೌಟ್ ಎಂದು ಕರೆಯಲಾಗುತ್ತದೆ. ಗೌಟ್ ಎಂಬುದು ರಕ್ತದಲ್ಲಿ ಯೂರಿಕ್ ಆಮ್ಲದ ಹೆಚ್ಚಿದ ಮಟ್ಟದಿಂದ ಉಂಟಾಗುವ ಒಂದು ರೀತಿಯ ಸಂಧಿವಾತವಾಗಿದೆ. ಗೌಟ್ ನೋವು ಸಾಮಾನ್ಯವಾಗಿ ಬೆಳಗ್ಗೆ ಇದ್ದಕ್ಕಿದ್ದಂತೆಯೇ ಪ್ರಾರಂಭವಾಗುತ್ತದೆ. ಕಾಲ್ಬೆರಳು ಮತ್ತು ಹಿಮ್ಮಡಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ನೀವು ಸುಲಭವಾಗಿ ಗುರುತಿಸಬಹುದಾದ ಲಕ್ಷಣವಾಗಿದೆ. ನೀವು ಈ ರೋಗಲಕ್ಷಣವನ್ನ ನಿರಂತರವಾಗಿ ಅನುಭವಿಸುತ್ತಿದ್ದರೆ ತಕ್ಷಣವೇ ವೈದ್ಯರನ್ನ ಸಂಪರ್ಕಿಸಬೇಕು.
ಏನು ಮಾಡಬೇಕು?
ಮೊದಲನೆಯದಾಗಿ ನಿಮ್ಮ ಆಹಾರದಿಂದ ಕೆಂಪು ಮಾಂಸ, ಸಮುದ್ರಾಹಾರ, ದ್ವಿದಳ ಧಾನ್ಯಗಳು, ಆಲ್ಕೋಹಾಲ್ನಂತಹ ಹೆಚ್ಚಿನ ಪ್ಯೂರಿನ್ ಹೊಂದಿರುವ ಆಹಾರಗಳನ್ನ ತೆಗೆದುಹಾಕಿ. ಕುಡಿಯುವ ನೀರು ಬಹಳ ಮುಖ್ಯ. ನೀರು ಕುಡಿಯುವ ಮೂಲಕ ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನ ಶೋಧಿಸಿ ಮೂತ್ರದ ಮೂಲಕ ಹೊರಹಾಕುತ್ತವೆ. ಆದ್ದರಿಂದ ದಿನವಿಡೀ 8 ರಿಂದ 10 ಗ್ಲಾಸ್ ನೀರು ಕುಡಿಯುವುದನ್ನ ರೂಢಿಸಿಕೊಳ್ಳಿರಿ. ಬೊಜ್ಜು ಇರುವವರಲ್ಲಿ ಹೆಚ್ಚಿನ ಮಟ್ಟದ ಯೂರಿಕ್ ಆಮ್ಲವಿರುತ್ತದೆ, ಆದ್ದರಿಂದ ನಿಯಮಿತ ವ್ಯಾಯಾಮವು ತೂಕವನ್ನ ನಿಯಂತ್ರಣದಲ್ಲಿಡುತ್ತದೆ. ನೋವು ಇನ್ನೂ ಕಡಿಮೆಯಾಗದಿದ್ದರೆ ನೀವು ವೈದ್ಯರನ್ನ ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)