)
Best cooking oil for heart : ನೀವು ದಿನನಿತ್ಯ ತಿನ್ನುವ ಆಹಾರದಲ್ಲಿ ಆರೊಗ್ಯಕರ ಎಣ್ಣೆ ಬಳಕೆ ಎಷ್ಟು ಮುಖ್ಯ ಎಂಬುವುದು ನಿಮಗೆ ಗೊತ್ತಾ? ಆರೋಗ್ಯವಂತ ದೇಹವನ್ನು ಪಡೆಯಬೇಕಾದರೆ ಸೇವಿಸುವ ಆಹಾರದಲ್ಲಿ ಯಾವ ರೀತಿಯ ಅಂಶಗಳು ಅಡಕವಾಗಿವೆ ಅದು ಹೇಗೆ ತಯಾರಾಗುತ್ತದೆ ಎಂಬುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಎಣ್ಣೆ ಪದಾರ್ಥಗಳನ್ನು ತಿನ್ನುವುದರಿಂದ ಹೃದ್ರೋಗ ಮತ್ತು ಕ್ಯಾನ್ಸರ್ ಬರುವ ಸಾದ್ಯತೆ ಹೆಚ್ಚು. ಇದು ಬಹಳ ಅಪಾಯಕಾರಿಯೂ ಹೌದು.
ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಎಣ್ಣೆಯನ್ನು ಹೆಚ್ಚಾಗಿ ಬಳಸುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಮದುಮೇಹ, ಕ್ಯಾನ್ಸರ್, ಚರ್ಮದ ಸಮಸ್ಯೆ ಮತ್ತು ಹಾರ್ಮೋನುಗಳ ಸಮಸ್ಯೆ ಉಂಟಾಗಬಹುದು. ಈ ರೀತಿ ರಾಸಾಯನಿಕದಿಂದ ತಯಾರಾದ ಎಣ್ಣೆಗಳಿಂದ ಮಾಡಿದ ಖಾದ್ಯಗಳನ್ನು ತಿನ್ನುವುದರಿಂದ ದೇಹ ಕಾಲ ಕಳೆದಂತೆ ದುರ್ಬಲವಾಗುತ್ತಾ ಬರುತ್ತದೆ, ಸ್ನಾಯುಗಳ ಶಕ್ತಿ ಕಡಿಮೆಯಾಗುತ್ತದೆ.
ಯಾವ ರೀತಿಯ ಎಣ್ಣೆ ಹಾನಿಕಾರಕ?
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಸೂರ್ಯಕಾಂತಿ, ಸೋಯಾಬಿನ್ ಮತ್ತು ಇತರ ಪ್ಯಾಕೆಟ್ ಎಣ್ಣೆಗಳನ್ನು ಹೆಚ್ಚಿನ ತಾಪಮಾನದಲ್ಲಿ ತಯಾರಿಸಲಾಗಿರುತ್ತದೆ. ಇದರಿಂದ ತಯಾರಿಕೆಯ ಸಂದರ್ಭದಲ್ಲಿ ಎಣ್ಣೆ ಆಕ್ಷಿಡೀಕರಣಗೊಂಡು ಫ್ರೀಯಾರ್ಡಿಕಲ್ಗಳನ್ನು ಬಿಡುಗಡೆ ಮಾಡಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಇದರಿಂದ ಎಣ್ಣೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಈ ರೀತಿಯ ಎಣ್ಣೆಯನ್ನು ನಾವು ಸೇವಿಸಿದಾಗ ನಮ್ಮ ಜೀವಕೋಶಗಳಿಗೆ ಹಾನಿಯುಂಟು ಮಾಡಿ ಅನೇಕ ದೀರ್ಘಕಾಲ ರೋಗಗಳಿಗೆ ಕಾರಣವಾಗುತ್ತದೆ.ಈ ರೀತಿಯ ಎಣ್ಣೆಯಲ್ಲಿ ಒಮೆಗಾ-೬ ಕೊಬ್ಬಿನಾಮ್ಲ ಇರುತ್ತದೆ ಇದು ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಸೇಖರಿಸುತ್ತದೆ.
ಸ್ಟ್ರೀಟ್ ಫುಡ್ ಆಹಾರದಲ್ಲಿನ ಕಳಪೆ ಗುಣಮಟ್ಟದ ಎಣ್ಣೆ
ಸಾಮಾನ್ಯವಾಗಿ ಬೀದಿಬದಿಯ ತಿನಿಸುಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಅದೇ ಎಣ್ಣೆಯನ್ನು ಪದೇ ಪದೇ ಬಿಸಿಮಾಡಿ ಪದಾರ್ಥಗಳನ್ನು ಫ್ರೈ ಮಾಡುತ್ತಾರೆ.ಇದರಲ್ಲಿ ಆಲ್ಡಿಹೈಡ್ ಎಂಬ ವಿಷ ಉತ್ಪತ್ತಿಯಾಗುತ್ತೆ ಇದು ಕೂಡ ಬಹಳ ಅಪಾಯಕಾರಿ ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು.
ಯಾವ ಎಣ್ಣೆ ಉತ್ತಮ?
ಸಾಸಿವೆ ಎಣ್ಣೆ, ತೆಂಗಿನ ಎಣ್ಣೆ, ಅಗಸೆ ಬೀಜದ ಎಣ್ಣೆ ಮುಂತಾದವುಗಳು ನೈಸರ್ಗಿಕವಾಗಿ ಸಂಸ್ಕರಿಸಬಹುದಾದ್ದರಿಂದ ಪೋಷಕಾಂಶಗಳನ್ನು ಉಳಿಸಿಕೊಂಡಿರುತ್ತದೆ.ಇದರಲ್ಲಿ ಒಮೆಗಾ -೩ ಇರುವುದರಿಂದ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ, ಇವು ಆರೋಗ್ಯಕ್ಕೆ ಒಳ್ಳೆದು. ಇನ್ನು ತುಪ್ಪ ಮತ್ತು ಅವಾಕಾಡೊ ಎಣ್ಣೆ ತಾಪಮಾನ ಬದಲಾವಣೆಯಲ್ಲಿ ಸ್ಥಿರವಾಗಿರುತ್ತದೆವೆ ಮತ್ತು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ. ಸಾಸಿವೆ ಮತ್ತು ಎಳ್ಳೆಣ್ಣೆಗಳು ಸಹ ಬಾರತೀಯ ಆಹಾರ ಪದ್ದತಿಗೆ ಹೊಂದಿಕೊಳ್ಳುವ ಸೂಕ್ತ ಎಣ್ಣೆಗಳಾಗಿವೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.