)
Best food for diabetes control
: ತೊಂಡೆಕಾಯಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು. ಈ ಹಸಿರು ತರಕಾರಿ ದೇಹದಲ್ಲಿ ಇನ್ಸುಲಿನ್ನಂತೆ ಕಾರ್ಯನಿರ್ವಹಿಸುತ್ತದೆ. ತೊಂಡೆಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು ಯಕೃತ್ತಿನಿಂದ ಗ್ಲೂಕೋಸ್ ಉತ್ಪಾದನೆಯನ್ನ ಕಡಿಮೆ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಕಂಡುಕೊಂಡಿವೆ. ನೀವು ತೊಂಡೆಕಾಯಿ ತರಕಾರಿಯನ್ನ ಬೇಯಿಸಿ ತಿನ್ನಬಹುದು.
ಮಧುಮೇಹ ರೋಗಿಗಳಿಗೆ ಸೋರೆಕಾಯಿ ಕೂಡ ಒಂದು ಪ್ರಯೋಜನಕಾರಿ ತರಕಾರಿ. ಸೋರೆಕಾಯಿ ತರಕಾರಿ ಸಕ್ಕರೆಯನ್ನ ಕಡಿಮೆ ಮಾಡಲು ಮಾತ್ರವಲ್ಲದೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೋರೆಕಾಯಿ ಮೆಟ್ಫಾರ್ಮಿನ್ನಂತೆ ಕಾರ್ಯನಿರ್ವಹಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಹೇಳಲಾಗಿದೆ.
ಚವಳಿಕಾಯಿ (Cluster beans) ಒಂದು ಪೌಷ್ಟಿಕ ತರಕಾರಿ. ಇದರಲ್ಲಿ ವಿಟಮಿನ್ ಸಿ, ಕೆ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ ಮತ್ತು ಫೈಬರ್ ಹೇರಳವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಮೂಳೆಗಳನ್ನು ಬಲಪಡಿಸಲು, ಮಲಬದ್ಧತೆ ನಿವಾರಿಸಲು, ರಕ್ತದೊತ್ತಡ ನಿಯಂತ್ರಿಸಲು ಮತ್ತು ಮಧುಮೇಹಿಗಳಿಗೆ ಸಹಾಯ ಮಾಡುತ್ತದೆ. ಚವಳಿಕಾಯಿ ಋತುಮಾನದ ತರಕಾರಿ ಆದರೆ ಇದರ ರುಚಿ ಮತ್ತು ಪ್ರಯೋಜನಗಳು ಅದ್ಭುತವಾಗಿವೆ. ಚವಳಿಕಾಯಿ ಫೈಬರ್ನಿಂದ ಸಮೃದ್ಧವಾಗಿದೆ. ಈ ತರಕಾರಿ ನಿಮ್ಮ ಕರುಳನ್ನ ಆರೋಗ್ಯವಾಗಿಡುತ್ತದೆ ಮತ್ತು ಆಹಾರ ಸೇವಿಸಿದ ನಂತರ ಸಕ್ಕರೆ ಮಟ್ಟ ಹೆಚ್ಚಾಗಲು ಬಿಡುವುದಿಲ್ಲ.
ನುಗ್ಗೆಕಾಯಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳನ್ನ ಹೊಂದಿರುವ ತರಕಾರಿ. ನುಗ್ಗೆಕಾಯಿ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ನೀವು ತರಕಾರಿಗಳ ಜೊತೆಗೆ ಸಾಂಬಾರ್ ಮತ್ತು ಪಲ್ಯ ತಯಾರಿಸಿಲು, ಸೂಪ್ ಮೂಲಕ ಬಳಸಬಹುದು.
ಪಡವಲಕಾಯಿಯು ಸೋರೆಕಾಯಿಯ ಆಕಾರದಲ್ಲಿರುವ ತರಕಾರಿ. ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ನೀವು ಇದನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ ಒಣ ತರಕಾರಿಯಂತೆ ತಿನ್ನಬಹುದು. ನೀವು ಇದನ್ನ ಸಾಂಬಾರ್ ಮಾಡಿ ಕೂಡ ಸೇವಿಸಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)