ಸ್ನಾನ ಮಾಡುವಾಗ ದೇಹದ ಈ ಭಾಗವನ್ನೇ ಮೊದ್ಲೂ ತೊಳೆಯಬೇಕು! ಕಾರಣ ಇದೆ..

Health tips : ತಮ್ಮ ಜ್ಞಾನ ಮತ್ತು ಪ್ರಬುದ್ಧ ಮಾತುಗಳಿಂದ ಹೆಸರುವಾಸಿಯಾಗಿರುವ ಪ್ರೇಮಾನಂದ್‌ ಜೀ ಮಹಾರಾಜ್ ಅವರು, ಸ್ನಾನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಹೇಳುತ್ತಾರೆ. ಪ್ರೇಮಾನಂದಜೀ ಅವರ ಪ್ರಕಾರ, ಸ್ನಾನ ಮಾಡುವಾಗ ಕೆಲವು ಅಭ್ಯಾಸಗಳನ್ನು ಅನುಸರಿಸುವುದರಿಂದ ದೈಹಿಕ ಆರೋಗ್ಯ ಸುಧಾರಿಸುವುದಲ್ಲದೆ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನವೂ ಉಂಟಾಗುತ್ತದೆ ಅಂತ ಹೇಳುತ್ತಾರೆ.. 

Written by - Krishna N K | Last Updated : Feb 27, 2025, 09:25 PM IST
    • ಪ್ರೇಮಾನಂದ್‌ ಜೀ ಮಹಾರಾಜ್ ಅವರು, ಸ್ನಾನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಹೇಳುತ್ತಾರೆ.
    • ಸ್ನಾನ ಮಾಡುವಾಗ ಕೆಲವು ಅಭ್ಯಾಸಗಳನ್ನು ಅನುಸರಿಸುವುದರಿಂದ ದೈಹಿಕ ಆರೋಗ್ಯ ಸುಧಾರಿಸುತ್ತವೆ.
    • ಮಾನಸಿಕ ಮತ್ತು ಆಧ್ಯಾತ್ಮಿಕ ಸಮತೋಲನವೂ ಉಂಟಾಗುತ್ತದೆ ಅಂತ ಹೇಳುತ್ತಾರೆ ಪ್ರೇಮಾನಂದ್‌ ಜೀ
ಸ್ನಾನ ಮಾಡುವಾಗ ದೇಹದ ಈ ಭಾಗವನ್ನೇ ಮೊದ್ಲೂ ತೊಳೆಯಬೇಕು! ಕಾರಣ ಇದೆ..

Premanand Ji Maharaj health tips : ಸ್ನಾನ ಮಾಡುವಾಗ ದೇಹದ ಯಾವ ಭಾಗಕ್ಕೆ ಮೊದಲು ನೀರನ್ನು ಹಾಕಿಕೊಳ್ಳಬೇಕು ಈ ವಿಧಾನ ದೇಹ ಮತ್ತು ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಅಂತ ಬಹಳ ಅರ್ಥಪೂರ್ಣವಾಗಿ ಪ್ರೇಮಾನಂದ್‌ ಜೀ ಅವರು ತಿಳಿಸಿಕೊಟ್ಟಿದ್ದಾರೆ.. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..

Add Zee News as a Preferred Source

ಸ್ನಾನ ಮಾಡುವಾಗ ಕೆಲವರು ಏಕಾಎಕಿ ತಲೆ ಮೇಲೆ ನೀರನ್ನು ಹಾಕಿಕೊಳ್ಳುತ್ತಾರೆ.. ಆದ್ರೆ.. ಮೊದಲು ಹೊಕ್ಕುಳಿನ ಮೇಲೆ ನೀರನ್ನು ಸುರಿಯಬೇಕು. ಹೊಕ್ಕುಳನ್ನು ದೇಹದ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಅದನ್ನು ನೀರಿನಿಂದ ತೊಳೆಯುವುದರಿಂದ ದೇಹದ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ... 

ಇದನ್ನೂ ಓದಿ:Grey hair tips: ಈ ಕಾಯಿಯನ್ನು ಕಲ್ಲಲ್ಲಿ ಜಜ್ಜಿ ರುಬ್ಬಿ ಕೂದಲಿಗೆ ಉಜ್ಜಿದರೆ ಬುಡದಿಂದಲೇ ಕಪ್ಪಾಗುತ್ತೆ ಬಿಳಿ ಕೂದಲು! ಹಣ್ಣು ಹಣ್ಣು ಮುದುಕರಾದ್ರೂ ಮತ್ತೆಂದೂ ಬಿಳಿಯಾಗಲ್ಲ  

ಪ್ರಾಚೀನ ಗ್ರಂಥಗಳ ಪ್ರಕಾರ, ಇದು ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ಬ್ರಹ್ಮಚರ್ಯವನ್ನು ಅಭ್ಯಾಸ ಮಾಡುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದಾದ ನಂತರ, ಸ್ನಾನ ಮಾಡುವಾಗ, ದೇಹದ ಇತರ ಭಾಗಗಳ ಮೇಲೆ ನಿಧಾನವಾಗಿ ನೀರನ್ನು ಸುರಿದುಕೊಳ್ಳಿ.

ಚಳಿಗಾಲದಲ್ಲೂ ತಣ್ಣೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪ್ರೇಮಾನಂದ್‌ ಜೀ ಮಹಾರಾಜ್ ನಂಬುತ್ತಾರೆ. ತಣ್ಣೀರಿನ ಸ್ನಾನ ಮಾಡುವುದರಿಂದ ದೇಹವು ಉಲ್ಲಾಸಗೊಳ್ಳುವುದಲ್ಲದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ. ಇದಲ್ಲದೆ, ತಣ್ಣೀರು ದೇಹವನ್ನು ರಿಫ್ರೆಶ್ ಮಾಡುವುದಲ್ಲದೆ, ಬಲಪಡಿಸುತ್ತದೆ. ಅಷ್ಟೇ ಅಲ್ಲ, ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಇದನ್ನೂ ಓದಿ: Heart attack first aid: ಹೃದಯಾಘಾತವಾದ ತಕ್ಷಣ ಈ ರೀತಿ ಮಾಡಿ! ಯಾವುದೇ ಕಾರಣಕ್ಕೂ ಸಾವು ಸಂಭವಿಸುವುದಿಲ್ಲ!  

ಸ್ನಾನ ಮಾಡುವಾಗ ಸೋಪು ಮತ್ತು ರಾಸಾಯನಿಕಗಳನ್ನು ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ. ಬದಲಾಗಿ ಜೇಡಿಮಣ್ಣನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿ. ದೇಹಕ್ಕೆ ಅಂಟಿಕೊಂಡಿರುವ ಕೊಳೆಯನ್ನು ಜೇಡಿಮಣ್ಣಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು ಅಂತ ಪ್ರೇಮಾನಂದ್‌ ಜೀ ಅವರು ಹೇಳುತ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News